SHOCKING NEWS: ವಿಶ್ವದ 50 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದ 39 ನಗರಗಳು

ಸ್ವಚ್ಛ ಭಾರತ ಅಭಿಯಾನ, ಭಾರತದ ಅತ್ಯಂತ ಮಹತ್ವದ ಮತ್ತು ಜನಪ್ರಿಯ ಅಭಿಯಾನಗಳಲ್ಲಿ ಒಂದು. ಸ್ವಚ್ಛ ಭಾರತ ಅಭಿಯಾನವು ಸ್ವಚ್ಛ ಭಾರತ ಮಿಷನ್ ಎಂದು ಅನುವಾದಿಸುತ್ತದೆ. ಭಾರತದ ಪರಿಸರ ಸ್ವಚ್ಛವಾಗಿಡಲೆಂದೇ ಈ ಒಂದು ಅಭಿಯಾನ ಚಾಲ್ತಿಗೆ ತರಲಾಗಿದೆ. ಆದರೆ ಸ್ವಿಸ್‌ ಐಕ್ಯುಏರ್‌ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ನೋಡ್ತಿದ್ರೆ, ಭಾರತದ ಪರಿಸರ ದಿನದಿಂದ ದಿನಕ್ಕೆ ಇನ್ನಷ್ಟು ಕಲುಷಿತವಾಗ್ತಾ ಹೋಗ್ತಿರುವ ಹಾಗೆ ಕಾಣಿಸುತ್ತೆ.

ಭಾರತವು 2022 ರಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ವಿಶ್ವದ ಎಂಟನೇ ದೇಶವಾಗಿದೆ. ಕಳೆದ ವರ್ಷ ಭಾರತ ಐದನೇ ಸ್ಥಾನದಲ್ಲಿತ್ತು. 50 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದ 39 ನಗರಗಳು ಸ್ಥಾನ ಪಡೆದಿವೆ ಎಂದು ಸ್ವಿಸ್‌ ಐಕ್ಯುಏರ್‌ ಸಂಸ್ಥೆ ವರದಿ ಮಾಡಿದೆ. ʼವಿಶ್ವ ವಾಯು ಗುಣಮಟ್ಟ ವರದಿ’ಯಲ್ಲಿ ಮಾಲಿನ್ಯ ಮಾಪಕ ‘ಪಿಎಂ 2.5’ ಮಟ್ಟವು ಸ್ವಲ್ಪ ಕುಸಿದಿದೆ. ಆದಾಗ್ಯೂ ಭಾರತದಲ್ಲಿನ ಗಾಳಿಯು ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮಿತಿಗಿಂತ 10 ಪಟ್ಟು ಹೆಚ್ಚು ಅಪಾಯದಲ್ಲಿದೆ ಎಂದು ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಸಿದ್ಧಪಡಿಸಿರುವ ಪಟ್ಟಿಯಲ್ಲಿ ಸವಿಸ್ತಾರವಾಗಿ ಹೇಳಿದ್ಧಾರೆ.

30,000 ಕ್ಕೂ ಹೆಚ್ಚು ಭೂ-ಆಧಾರಿತ ಮಾನದಂಡಗಳಿಂದ 131 ದೇಶಗಳ ಡೇಟಾವನ್ನು ತೆಗೆದುಕೊಳ್ಳಲಾಗಿದೆ. 7,300 ಕ್ಕೂ ಹೆಚ್ಚು ನಗರಗಳನ್ನು ಒಳಗೊಂಡಿರುವ ಪಟ್ಟಿಯ ಅಗ್ರಸ್ಥಾನದಲ್ಲಿ ಭಾರತೀಯ ನಗರಗಳು ಪ್ರಾಬಲ್ಯ ಹೊಂದಿವೆ. ಪಾಕಿಸ್ತಾನದ ಲಾಹೋರ್ ಮತ್ತು ಚೀನಾದ ಹೊಟಾನ್ ಮೊದಲ ಎರಡು ಅತ್ಯಂತ ಕಲುಷಿತ ನಗರಗಳಾಗಿದ್ದು, ರಾಜಸ್ಥಾನದ ಭಿವಾಡಿ ಮತ್ತು ದೆಹಲಿ ನಂತರದ ಸ್ಥಾನದಲ್ಲಿದೆ. ದೆಹಲಿಯ ‘ಪಿಎಂ 2.5’ ಮಟ್ಟವು ಸುರಕ್ಷಿತ ಮಿತಿಗಿಂತ ಸುಮಾರು 20 ಪಟ್ಟು ಹೆಚ್ಚು ಅಪಾಯದಲ್ಲಿದೆ.

ಇನ್ನೂ ಅಗ್ರ 10 ಕಲುಷಿತ ನಗರಗಳಲ್ಲಿ ಭಾರತದ 6 ನಗರಗಳಿವೆ. ಈ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿಯನ್ನು ‘ಗ್ರೇಟ್’ ದೆಹಲಿ ಮತ್ತು ನವದೆಹಲಿ ಎಂದು ವರ್ಗೀಕರಿಸಲಾಗಿದ್ದು, ಎರಡು ನಗರಗಳೂ ಕಲುಷಿತ ನಗರವೆಂಬ ಅಪಖ್ಯಾತಿಗೆ ಪಾತ್ರವಾಗಿವೆ. ದೆಹಲಿಯ ಪಕ್ಕದ ಪಟ್ಟಣಗಳಾದ ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್ ಮತ್ತು ಫರೀದಾಬಾದ್‌ಗಳು ಮಾಲಿನ್ಯ ಮಟ್ಟದಲ್ಲಿ ಇಳಿಕೆ ಕಂಡಿವೆ. ಆದರೆ ಈ ನಗರಗಳಲ್ಲಿನ ಮಾಲಿನ್ಯದ ನಿಜವಾದ ಮಟ್ಟವು ಭಾರತೀಯ ಸರಾಸರಿಗಿಂತ ತುಂಬಾ ಹೆಚ್ಚಾಗಿದೆ. ಜಾಗತಿಕವಾಗಿ ಬೆಂಗಳೂರು 440ನೇ ಸ್ಥಾನದಲ್ಲಿದ್ದು, ಇಲ್ಲಿನ ವಾಯುಗುಣಮಟ್ಟ ಸದ್ಯಕ್ಕೆ ಉತ್ತಮವಾಗಿದೆ.

htkt5eag

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read