alex Certify BREAKING : `ಈಗ ಭಾರತ ಚಂದ್ರನ ಮೇಲಿದೆ’ : ಚಂದ್ರಯಾನ-3 ಸಕ್ಸಸ್ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : `ಈಗ ಭಾರತ ಚಂದ್ರನ ಮೇಲಿದೆ’ : ಚಂದ್ರಯಾನ-3 ಸಕ್ಸಸ್ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ

ಬೆಂಗಳೂರು : ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಈ ಮೂಲಕ ಭಾರತ ಅಮೆರಿಕ, ರಷ್ಯಾ, ಚೀನಾದ ಬಳಿಕ ಐತಿಹಾಸಿಕ ಸಾಧನೆ ಮಾಡಿದೆ.

ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ದಕ್ಷೀಣ ಆಫ್ರಿಕಾದಿಂದಲೇ ಮಾತನಾಡಿರುವ ಪ್ರಧಾನಿ ಮೋದಿ, ನಾವು ನಮ್ಮ ಕಣ್ಣ ಮುಂದೆ ಇಂತಹ ಇತಿಹಾಸ ನೋಡುವುದು ಜೀವನ ಧನ್ಯವಾಗಲಿದೆ. ಈ ಕ್ಷಣ ರಾಷ್ಟ್ರದ ಜೀವತಾವಧಿಯಲ್ಲಿ ಚಿರಂಜೀವಿ ಚೇತನವಾಗಲಿದೆ. ಇದು ಅವಿಸ್ಮರಣಿಯಾವಾಗಿದೆ. ಅದ್ಭೂತಪೂರ್ವಕವಾಗಿದೆ. ಇದು ನವ ಭಾರತದ ಜಯಘೋಷ. 140 ಕೋಟಿ ಜನರ ಎದೆ ಬಡಿತ ಕ್ಷಣ, ಭಾರತದ ಹೊಸ ವಿಶ್ವಾಸ ಮೂಡಿಸಿದೆ. ಅಮೃತಕಾಲದ ಮೊದಲ ಯಶಸ್ವಿಯಾಗಿದೆ. ಭೂಮಿ ಮೇಲೆ ನಾವು ಸಂಕಲ್ಪ ಮಾಡಿದ್ದೇವೆ. ಚಂದ್ರನಲ್ಲಿ ಸಾಕಾರ ಮಾಡಿದ್ದೇವೆ. ಭಾರತ ಈಗ ಚಂದ್ರನಲ್ಲಿದೆ. ನಾವು 140 ಕೋಟಿ ಜನರಿಗೆ ಕೋಟಿ ಕೋಟಿ ಅಭಿನಂದನೆ ಸಲ್ಲಿಸುತ್ತೇನೆ. ಇದುವರೆಗೆ ಯಾವ ದೇಶವೂ ಚಂದ್ರನ ದಕ್ಷಿಣ ಧ್ರುವ ತಲುಪಿಲ್ಲ.ಭಾರತದ ವಿಜ್ಞಾನಿಗಳು ಅದನ್ನು ಮಾಡಿ ತೋರಿಸಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಭಾರತದ ವಿಜ್ಞಾನಿಗಳು ಇದನ್ನು ಸಾಧಿಸಿ ತೋರಿಸಿದ್ದಾರೆ. ಭಾರತ ಇಂದಿನ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...