ಮಧುಮೇಹ ದಿನೇ ದಿನೇ ಅಪಾಯಕಾರಿ ಕಾಯಿಲೆಯಾಗಿ ಬದಲಾಗುತ್ತಿದೆ. ಸಕ್ಕರೆ ಕಾಯಿಲೆ ನಮ್ಮನ್ನು ಆವರಿಸಿಕೊಂಡಿದ್ದರೂ ಅದು ಗೊತ್ತಾಗುವುದೇ ಇಲ್ಲ, ಅಂತಹ ವಿಚಿತ್ರ ಕಾಯಿಲೆ ಇದು. ಹಾಗಾಗಿ ಮಧುಮೇಹದ ಅಪಾಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ. ರೋಗವನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ಕೂಡ ತಿಳಿಯಲೇಬೇಕು.
40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಮಧುಮೇಹ ಬರುತ್ತದೆ ಎಂಬ ಭಾವನೆ ತಪ್ಪು. ಮಕ್ಕಳು ಮತ್ತು ಯುವಕರು ಕೂಡ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಬ್ರಿಟನ್‌ನ ಒಟ್ಟಾರೆ ಜನಸಂಖ್ಯೆ ಸುಮಾರು 7 ಕೋಟಿ. ಆದರೆ ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆಯೇ 10 ಕೋಟಿಯಷ್ಟಿದೆ.
2030ರ ವೇಳೆಗೆ ಭಾರತದಲ್ಲಿ ಒಟ್ಟು ಮಧುಮೇಹ ರೋಗಿಗಳ ಸಂಖ್ಯೆ 10 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ 2023ರಲ್ಲಿಯೇ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ಇಷ್ಟಾಗಿದೆ. ಭಾರತದಲ್ಲಿ 20 ವರ್ಷ ವಯಸ್ಸಿನ 65 ಪ್ರತಿಶತ ಯುವಕರು ಮತ್ತು 56 ಪ್ರತಿಶತ ಯುವತಿಯರು ಮಧುಮೇಹದಿಂದ ಬಳಲುತ್ತಿದ್ದಾರೆ.
ಯುವಜನರಲ್ಲಿ ಹೆಚ್ಚುತ್ತಿದೆ ಸಕ್ಕರೆ ಕಾಯಿಲೆ!
ಮಧುಮೇಹವನ್ನು ಆನುವಂಶಿಕ ಕಾಯಿಲೆ ಎಂದು ಪರಿಗಣಿಸುವ ಸಮಯವಿತ್ತು. ಆದರೆ ಕೆಟ್ಟ ಜೀವನಶೈಲಿ ಕೂಡ ಮಧುಮೇಹಕ್ಕೆ ಕಾರಣವಾಗುತ್ತಿದೆ. ಮಧುಮೇಹವು ಗುಣಪಡಿಸಲಾಗದ ಕಾಯಿಲೆ. ಅಂದರೆ ಈ ರೋಗವು ವ್ಯಕ್ತಿ ಜೀವಂತವಾಗಿರುವವರೆಗೆ ಇರುತ್ತದೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ.
ಭಾರತವನ್ನು ಈಗ ವಿಶ್ವದ ಮಧುಮೇಹ ರಾಜಧಾನಿ ಎಂದು ಕರೆಯಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ 50 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇವರಲ್ಲಿ ಭಾರತವೊಂದರಲ್ಲೇ 10 ಕೋಟಿ ರೋಗಿಗಳಿದ್ದಾರೆ. ಕಳೆದ 4 ವರ್ಷಗಳಲ್ಲಿ ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ 44 ಪ್ರತಿಶತದಷ್ಟು ಹೆಚ್ಚಾಗಿದೆ. ಸಮೀಕ್ಷೆಯ ಪ್ರಕಾರ ಸದ್ಯ ಭಾರತದಲ್ಲಿ ಸುಮಾರು 13 ಕೋಟಿ 30 ಲಕ್ಷ ರೋಗಿಗಳಿದ್ದಾರೆ
ಜಂಕ್ ಫುಡ್, ಸಂಸ್ಕರಿತ ಆಹಾರ, ಮೊದಲೇ ಸಿದ್ಧಪಡಿಸಿದ ಪ್ಯಾಕ್ ಮಾಡಿದ ಆಹಾರದ ಟ್ರೆಂಡ್ ಹೆಚ್ಚಾಗಿದ್ದು, ಇವು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಮಧುಮೇಹಕ್ಕೆ ಮುಖ್ಯ ಕಾರಣವೆಂದರೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳದಿರುವುದು.
ಗೋವಾದಲ್ಲಿದ್ದಾರೆ ಅಧಿಕ ರೋಗಿಗಳು!
ಮಧುಮೇಹ ರೋಗಿಗಳ ಸಂಖ್ಯೆ ಗೋವಾದಲ್ಲಿ ಹೆಚ್ಚಾಗಿದೆ. ಇಲ್ಲಿನ ಜನಸಂಖ್ಯೆಯಲ್ಲಿ ಶೇ.26.4ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಪಾಂಡಿಚೇರಿ ಎರಡನೇ ಸ್ಥಾನದಲ್ಲಿದೆ. ಕೇರಳ ಮೂರನೇ ಸ್ಥಾನದಲ್ಲಿದೆ. ಚಂಡೀಗಢ ನಾಲ್ಕನೇ ಹಾಗೂ ರಾಜಧಾನಿ ದೆಹಲಿ ಐದನೇ ಸ್ಥಾನದಲ್ಲಿದೆ.
ಮಧುಮೇಹ ನಮ್ಮ ಕಣ್ಣುಗಳು, ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಅದರ ರೋಗಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ.
ಮಧುಮೇಹದ ಲಕ್ಷಣಗಳು
– ಅತಿಯಾದ ಬಾಯಾರಿಕೆ
– ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆ
– ಸುಸ್ತು
– ತೂಕ ಇಳಿಕೆ
– ಪದೇ ಪದೇ ಬಾಯಿ ಹುಣ್ಣು
– ಮಂದ ದೃಷ್ಟಿ
– ಗಾಯ ಗುಣವಾಗಲು ವಿಳಂಬ
ಈ ರೋಗಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ. ಜೀವನಶೈಲಿಯಲ್ಲಿ ಸ್ವಲ್ಪ ಸುಧಾರಣೆ ಮಾಡಿಕೊಂಡರೆ ಈ ಕಾಯಿಲೆಯಿಂದ ರಕ್ಷಿಸಿಕೊಳ್ಳಬಹುದು. ಮಧುಮೇಹವು ಮಾನವನ ದೇಹವನ್ನು ಕ್ರಮೇಣ ಟೊಳ್ಳಾಗಿಸುವ ಕಾಯಿಲೆಯಾಗಿದೆ. ವಯಸ್ಸು ಹೆಚ್ಚಾದಂತೆ ಸಮಸ್ಯೆಗಳು ಹೆಚ್ಚಾಗುತ್ತವೆ. ಯುವಕರಲ್ಲಿ ಮಧುಮೇಹಕ್ಕೆ ಮುಖ್ಯ ಕಾರಣಗಳು ಅಧಿಕ ತೂಕ, ವ್ಯಾಯಾಮದ ಕೊರತೆ, ಧೂಮಪಾನ ಮತ್ತು ಮತ್ತು ಒತ್ತಡ.
ನಗರಗಳಲ್ಲಿ 32 ಪ್ರತಿಶತ ಜನರು ಮಧುಮೇಹವನ್ನು ಹೊಂದಿದ್ದಾರೆ. ಹಳ್ಳಿಗಳಲ್ಲಿ ಶೇ.24ರಷ್ಟು ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹವನ್ನು ನಿಯಂತ್ರಿಸಲು ತೂಕವನ್ನು ನಿಯಂತ್ರಿಸಿ. ಪ್ರತಿದಿನ ವ್ಯಾಯಾಮ ಮಾಡಿ, ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ. ಹೆಚ್ಚು ನೀರು ಕುಡಿಯಿರಿ, ಧೂಮಪಾನ ಮಾಡಬೇಡಿ ಮತ್ತು ಮದ್ಯಪಾನ ಮಾಡಬೇಡಿ.