ನ್ಯೂಯಾರ್ಕ್: ಡಸ್ಟರ್‌ನ ಮೂರನೇ ತಲೆಮಾರಿನ ಕಾರು ಇನ್ನೆರಡು ವರ್ಷಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ರೆನಾಲ್ಟ್-ನಿಸ್ಸಾನ್ ಕಂಪೆನಿಗಳ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದ್ದು, ಡಸ್ಟರ್, ನಿಸ್ಸಾನ್ ಕಾರಿನ ರೂಪವನ್ನು ಹೋಲಲಿದೆ.
ರೆನಾಲ್ಟ್ ಡಸ್ಟರ್ ಯುರೋಪ್‌ನಲ್ಲಿ ಪರೀಕ್ಷಾರ್ಥ ಸಂಚಾರ ಮಾಡಿದೆ. 2024 ರಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದ್ದು, 2025ರ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಯೂರೋಪ್ನಲ್ಲಿ ಟೆಸ್ಟ್ ಡ್ರೈವಿಂಗ್ ಮಾಡಿರುವ ಫೋಟೋಗಳನ್ನು ಕಂಪೆನಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ವಾಹನ ಪ್ರಿಯರನ್ನು ಇದು ಸೆಳೆಯುತ್ತಿದೆ.
ದಪ್ಪನಾದ ಚಕ್ರ ಕಮಾನುಗಳುಗಳನ್ನು ಈ ಕಾರು ಹೊಂದಿದ್ದು, ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೆಡ್‌ಲೈಟ್‌ಗಳನ್ನು ಸಂಯೋಜಿಸಲಾಗಿದೆ. ಕಾರಿನ ಹಿಂಭಾಗವು ಬಿಗ್‌ಸ್ಟರ್ ಕಾರಿನ ಹೋಲಿಕೆ ಪಡೆದಿದೆ. ಇದರಲ್ಲಿ ಇರುವ ಮೇಲ್ಛಾವಣಿಯ ಸ್ಪಾಯ್ಲರ್, ಕ್ಯಾಸ್ಕೇಡಿಂಗ್ ವಿಂಡ್‌ಶೀಲ್ಡ್, ನೇರವಾದ ಟ್ರಂಕ್, ಟೈಲ್‌ಲೈಟ್‌ಗಳನ್ನು ಸಹ ಬಿಗ್‌ಸ್ಟರ್ ಪರಿಕಲ್ಪನೆಯಿಂದ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ.
ಸದ್ಯ ಭಾರತದಲ್ಲಿ ಮೊದಲ ತಲೆಮಾರಿನ ಡಸ್ಟರ್ ಮಾತ್ರ ಲಭ್ಯವಿದ್ದು, ಮೂರನೆಯ ತಲೆಮಾರಿನ ಕಾರನ್ನು ನೋಡಲು ವಾಹನ ಪ್ರಿಯರ ಕಾತರ ಹೆಚ್ಚಾಗಿದೆ.