ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ದಿನಗಳ ಕಾಲ ನಡೆದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದಾರೆ.
ದೇವಾಲಯಕ್ಕೆ ಮೂರು ದಿನದಲ್ಲಿ 2.24 ಕೋಟಿ ರೂಪಾಯಿ ಆದಾಯ ಬಂದಿದೆ. ದೀಪಾವಳಿ ಜಾತ್ರಾ ಮಹೋತ್ಸವ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ತಮಿಳುನಾಡಿನಿಂದ 7 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ.
9558 ಹುಲಿ ವಾಹನ, 427 ರುದ್ರಾಕ್ಷಿ ವಾಹನ, 1279 ಬಸವ ವಾಹನ, 1825 ಚಿನ್ನದ ರಥೋತ್ಸವ, 111 ಬೆಳ್ಳಿ ರಥೋತ್ಸವ ಹರಕೆಯನ್ನು ಭಕ್ತರು ಸಲ್ಲಿಸಿದ್ದಾರೆ. ವಿವಿಧ ಸೇವೆಗಳಿಂದ, ಲಾಡು ಮಾರಾಟ, ಅಕ್ಕಿ ಸೇವೆ, ಮಿಶ್ರ ಪ್ರಸಾದ, ಮಾಹಿತಿ ಕೇಂದ್ರ, ತಾಳಬೆಟ್ಟ ಭವನ, ಪಾರ್ಕಿಂಗ್, ತೀರ್ಥ ಪ್ರಸಾದ, ಬ್ಯಾಗ್ ಮಾರಾಟ ಸೇರಿ ಇನ್ನಿತರೆ ಮೂಲಗಳಿಂದ 2,24,91,122 ರೂಪಾಯಿ ಆದಾಯ ಬಂದಿದೆ ಎಂದು ಹೇಳಲಾಗಿದೆ.