ತೂಕ ಹೆಚ್ಚಿಸಿಕೊಳ್ಳಲು ಕೆಲವರು ಹರಸಾಹಸ ಪಡುತ್ತಾರೆ. ಅತಿಯಾಗಿ ತಿನ್ನುತ್ತಾರೆ. ಆದರೆ ನೀವು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ ಯಾವುದೇ ಕಾಯಿಲೆಯಿಂದ ಬಳಲದೆ ಆರೋಗ್ಯವಾಗಿದ್ದರೆ ನಿಮ್ಮ ತೂಕ ಹೆಚ್ಚಾಗುತ್ತದೆ.
ಹಾಗಾಗಿ ಆರೋಗ್ಯವಾಗಿ, ತೂಕ ಹೆಚ್ಚಿಸಿ ಕೊಳ್ಳಲು ಬೆಳಿಗ್ಗಿನ ಉಪಹಾರಗಳಲ್ಲಿ ಇವುಗಳನ್ನು ಸೇರಿಸಿ ತಿನ್ನಿ.
*ಕಾಬೂಲ್ ಕಡಲೆಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಂ, ರಂಜಕ, ಕಬ್ಬಿಣ, ಮೆಗ್ನಿಸಿಯಂ ಅಧಿಕವಾಗಿರುತ್ತದೆ. ರಾತ್ರಿ ಇದನ್ನು ನೆನೆಸಿ ಬೆಳಿಗ್ಗೆ ಉಪಹಾರದಲ್ಲಿ ಅದನ್ನು ಸೇವಿಸಿದರೆ ನಿಮ್ಮ ತೂಕ ಹೆಚ್ಚಾಗುತ್ತದೆಯಂತೆ.
*ಸಿಹಿ ಆಲೂಗಡ್ಡೆಯಲ್ಲಿ ಅಧಿಕ ಪೋಷಕಾಂಶಗಳಿರುವುದರಿಂದ ಇವುಗಳಿಂದ ತಯಾರಿಸಿದ ಆಹಾರವನ್ನು ಬೆಳಿಗ್ಗಿನ ಉಪಹಾರದ ವೇಳೆ ಸೇವಿಸಿದರೆ ನೀವು ದಪ್ಪವಾಗಬಹುದು.
*ಗೋಧಿಯಲ್ಲಿ ಕಡಿಮೆ ಕೊಬ್ಬು ಮತ್ತು ಫೈಬರ್ ಹೆಚ್ಚಾಗಿದೆ. ನಿಮ್ಮ ತೂಕ ಹೆಚ್ಚಿಸಲು ಸಹಕಾರಿಯಾಗಿದೆ. ಗೋಧಿ ರವಾದಿಂದ ತಯಾರಿಸಿದ ಉಪಹಾರವನ್ನು ಬೆಳಿಗ್ಗೆ ವೇಳೆ ಸೇವಿಸಿದರೆ ತೂಕ ಹೆಚ್ಚಾಗುತ್ತದೆ.
*ಬೆಳಿಗ್ಗೆ ಹಾಲು ಕುಡಿದು 20 ನಿಮಿಷದ ಬಳಿಕ ಬಾಳೆಹಣ್ಣನ್ನು ಸೇವಿಸಿದರೆ ಇದರಿಂದ ನಿಮ್ಮ ಶಕ್ತಿ ಅಧಿಕವಾಗುತ್ತದೆ ಮತ್ತು ನಿಮ್ಮ ತೂಕ ಹಚ್ಚಾಗುವುದು.
*ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿದೆ. ಬೆಳಿಗ್ಗಿನ ಉಪಹಾರದಲ್ಲಿ 2 ಮೊಟ್ಟೆಗಳನ್ನು ಬಳಸಿ ಸೇವಿಸಿದರೆ ನಿಮ್ಮ ತೂಕ ಹೆಚ್ಚಾಗುತ್ತದೆ.
*ಮೊಸರು ತಿಂದರೆ ನಿಮಗೆ ಉತ್ತಮವಾಗಿ ಬೇಗನೆ ಆಹಾರ ಜೀರ್ಣವಾಗುವುದರಿಂದ ಇನ್ನು ಹೆಚ್ಚು ಆಹಾರ ಸೇವಿಸಬಹುದು.