alex Certify ಮನೆಯಲ್ಲಿ ಶ್ರೀ ಚಕ್ರ , ಸಾಲಿಗ್ರಾಮ ಪೂಜಿಸುವವರು ತಿಳಿದುಕೊಳ್ಳಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಶ್ರೀ ಚಕ್ರ , ಸಾಲಿಗ್ರಾಮ ಪೂಜಿಸುವವರು ತಿಳಿದುಕೊಳ್ಳಿ ಈ ವಿಷಯ

1. ಮಡಿ ಮೈಲಿಗೆ ಅನುಸರಿಸಿ.

೨. ಪ್ರತಿದಿನ ನೈವೇದ್ಯ ಆಗಬೇಕು.

೩. ಮನೆಗೆ ಬಂದ ಸುಮಂಗಲಿಯರಿಗೆ ಅರಿಸಿನ ಕುಂಕುಮ ಕೊಡದೇ ಕಳುಹಿಸಬೇಡಿ.

೪. ಸ್ತ್ರೀಯರನ್ನು ಗೌರವಿಸಿ, ಯಾವುದೇ ಕಾರಣಕ್ಕೂ ಕಣ್ಣಲ್ಲಿ ನೀರು ಹಾಕಿಸಬೇಡಿ.

೫. ಶುಕ್ರವಾರ, ಮಂಗಳವಾರಗಳಂದು ದೇವರ ವಿಗ್ರಹ ಇತರೆ ವಸ್ತುಗಳನ್ನು ಶುದ್ಧ ಮಾಡಬೇಡಿ.

೬. ಮನೆಯ ಹೊಸ್ತಿಲನ್ನು ಕಸದ ಪೊರಕೆಯಲ್ಲಿ ಗುಡಿಸಬೇಡಿ.

೭. ಪ್ರತಿ ಶುಕ್ರವಾರ ದೇವರಿಗೆ ಆರತಿ ಮಾಡಿ, ಪಾನಕ, ಕೋಸಂಬರಿ ದಾನ ಮಾಡಿ.

೮. ದೇವರಿಗೆ ಮೊಸರನ್ನ, ಚಿತ್ರಾನ್ನ, ತುಪ್ಪದ ಅನ್ನ, ಬೆಲ್ಲದ ಅನ್ನ, ಸಿಹಿ ಪೊಂಗಲ್, ಶಾಲ್ಯಾಹ್ನ ನೈವೇದ್ಯ ಮಾಡಿ.
ಯಾವುದು ಸಾಧ್ಯವೋ ಅದನ್ನು ಮಾಡುತ್ತಿರಿ.

೯. ದೊಡ್ಡ ವಿಗ್ರಹಗಳು ಇದ್ದರೆ ೧ ಸೇರು ಅನ್ನವನ್ನು ನೈವೇದ್ಯ ಮಾಡಬೇಕಾಗುತ್ತದೆ.
ಅದಕ್ಕೆ ತುಂಬಾ ದೊಡ್ಡ ವಿಗ್ರಹ ಇಟ್ಟುಕೊಳ್ಳಬೇಡಿ.

೧೦. ದೇವರ ಪೂಜಾ ಸಮಯದಲ್ಲಿ ಒಗೆದಿರುವ ಶುದ್ಧ ವಸ್ತ್ರಗಳನ್ನೇ ಧರಿಸಿ, ಶ್ವೇತ ವರ್ಣದ ಪಂಚೆ-ಶಲ್ಯ ತುಂಬಾ ಶ್ರೇಷ್ಠ.

೧೧. ದೇವರ ಪೂಜಾ ಸಮಯದಲ್ಲಿ ಆಕಳಿಕೆ ಬಂದು ಪೂಜೆ ಮಾಡೋದು, ಕೋಪ ಮಾಡಿಕೊಂಡು ಪೂಜೆ ಮಾಡೋದು, ಅನಗತ್ಯ ಸಂಭಾಷಣೆ,ನಿರ್ಮಾಲ್ಯ ತೆಗೆಯದೆ ಪೂಜೆ ಮಾಡೋದು ಮಾಡಬೇಡಿ.

12. ಭಿನ್ನವಾದ ವಿಗ್ರಹ, ದೇವರ ಪೂಜಾ ಸಾಮಗ್ರಿಗಳನ್ನು ಬಳಸಬೇಡಿ.

೧೩. ದುರ್ಗಂಧ ಪುಷ್ಪ, ನಿರ್ಗಂಧ ಪುಷ್ಪ ಪೂಜೆಗೆ ಬಳಸಬೇಡಿ.
ಉದಾಹರಣೆ ; ಚಂಡು ಹೂವು, ಚಿಂತಾಮಣಿ ಹೂವು,.. ಇತ್ಯಾದಿ

೧೩. ಹಸೀ ಹಾಲನ್ನೇ ದೇವರ ಪೂಜೆಗೆ ಬಳಸಿ.

೧೪. ದೇವರ ವಿಗ್ರಹಕ್ಕೆ ಇಡುವ ಹೂವು ಚೆನ್ನಾಗಿ ಅರಳಿರಲಿ, ತೊಟ್ಟು ತೆಗೆದು ದೇವರ ವಿಗ್ರಹಗಳಿಗೆ ಇಡಿ.

೧೫. ದೇವರಿಗೆ ನೈವೇದ್ಯ ಮಾಡೋವಾಗ ಪಾನಕಕ್ಕೆ ಸಕ್ಕರೆ ಬದಲು ಜೇನುತುಪ್ಪ ಹಾಕಿದರೆ ವಿಶೇಷ ಫಲಪ್ರಾಪ್ತಿಯಾಗುತ್ತದೆ.

೧೬. ಪೂರ್ಣಫಲ ನೈವೇದ್ಯ ಮಾಡುವುದು ತುಂಬಾ ವಿಶೇಷ ಫಲವನ್ನು ನೀಡುವುದು, ಸಕಲ ಕಾರ್ಯ ವಿಜಯವಾಗುವುದು. ,ಮನೆಯಲ್ಲಿ ಶುಭಕಾರ್ಯಗಳು ಆಗುತ್ತವೆ.

೧೭. ಗಂಡಸರು ಶಲ್ಯವನ್ನು ಹೊದಿಯದೇ ಪೂಜೆ ಮಾಡಬಾರದು, ಹಾಗೆ ಮಾಡಿದರೆ ಪೂಜಾ ಫಲವೆಲ್ಲಾ ರಾಕ್ಷಸರ ಪಾಲಾಗುವುದು.

೧೮. ಗರಿಕೆ ಇಲ್ಲದ ಗಣೇಶನ ಪೂಜೆ, ತುಳಸೀ ಇಲ್ಲದ ನೈವೇದ್ಯ, ಬಿಲ್ವಪತ್ರೆ ಇಲ್ಲದ ಅರ್ಚನೆ ಪೂಜೆಗಳು ಫಲ ನೀಡುವುದಿಲ್ಲ.

೧೯. ಬಲಮುರಿ ಗಣೇಶ, ಬಲಮುರಿ ಶಂಖ, ಸಾಲಿಗ್ರಾಮ, ಶ್ರೀ ಚಕ್ರ, ಎರಡೂ ಪಾದ ಕಾಣಿಸುವ ಮಹಾಲಕ್ಷ್ಮಿ, ಅಷ್ಟಮುಖೀ ರುದ್ರಾಕ್ಷಿ, ಪಂಚಮುಖೀ ಗಾಯತ್ರೀ ದೇವಿ, ಪಂಚಮುಖಿ ಆಂಜನೇಯ.. ಇತ್ಯಾದಿ ಇವೆಲ್ಲಾ ತುಂಬಾ ವಿಶೇಷ ಫಲ ಕೊಡೋ ಅಂತಹ ದೇವರುಗಳು..
ಅಷ್ಟೈಶ್ವರ್ಯಗಳನ್ನೂ ಕರುಣಿಸುತ್ತವೆ.

೨೦. ದೇವರ ಮನೆಯಲ್ಲಿ ಅಷ್ಟದಳ ಪದ್ಮ ರಂಗೋಲಿ ಹಾಕಿ ಅದರ ಮೇಲೆ ದೇವರನ್ನಿಟ್ಟು ಪೂಜಿಸಿದರೆ ತುಂಬಾ ವಿಶೇಷ ಫಲ, ಇಷ್ಟಾರ್ಥ ಸಿದ್ದಿಯಾಗುವುದು.

21. ಯಾವುದೇ ಪುಸ್ತಕ ಸಹಸ್ರನಾಮ ಓದುವಾಗ ದೇವರ ಪುಸ್ತಕಗಳನ್ನು ಮಣೆಯ ಮೇಲೆ ಅಥವಾ ಪೀಠದಲ್ಲಿ ಇಟ್ಟು ಓದಿದರೆ ತುಂಬಾ ಒಳ್ಳೆಯದು.

ಭವಿಷ್ಯದ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ದೈವಜ್ಞ ಪಂಡಿತ್ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್ ತಂತ್ರಿ

ಜ್ಯೋತಿಷ್ಯ ಶಾಸ್ತ್ರತಜ್ಞರು 8548998564

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...