BIG NEWS:‌ ಪುರುಷರಿಗಾಗಿ ಗರ್ಭನಿರೋಧಕ ಚುಚ್ಚುಮದ್ದು ಕಂಡುಹಿಡಿದ ಐಸಿಎಂಆರ್​ !

ಇದೇ ಮೊಟ್ಟ ಮೊದಲ ಬಾರಿಗೆ ಇಂಡಿಯನ್​ ಕೌನ್ಸಿಲ್​ ಅಫ್​ ಮೆಡಿಕಲ್​​ ರಿಸರ್ಚ್​ ಪುರುಷರಿಗಾಗಿ ಗರ್ಭನಿರೋಧಕವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಗರ್ಭನಿರೋಧಕವು ದೀರ್ಘಾವಧಿಯ ಸಂತಾನಹೀನತೆಯನ್ನು ನೀಡುತ್ತದೆ ಎಂದು ಐಸಿಎಂಆರ್​​ ಹೇಳಿದೆ.

ಐಸಿಎಂಆರ್​ ಈ ಗರ್ಭನಿರೋಧಕವನ್ನು 303 ಆರೋಗ್ಯವಂತ ಪುರುಷರ ಮೇಲೆ ಪರೀಕ್ಷಿಸಿ ಅಧ್ಯಯನ ನಡೆಸಲು ಬರೋಬ್ಬರಿ 7 ವರ್ಷವನ್ನು ತೆಗೆದುಕೊಂಡಿದೆ. ಹಾರ್ಮೋನ್​ ಅಲ್ಲದ ಈ ಚುಚ್ಚುಮದ್ದು ಪುರುಷರಲ್ಲಿ ಗರ್ಭನಿರೋಧಕದಂತೆ ವರ್ತಿಸಲಿದ್ದು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎನ್ನುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ಜರ್ನಲ್​ ಆಂಡ್ರೋಲಜಿಯಲ್ಲಿ ಈ ಅಧ್ಯಯನದ ಸಂಶೋಧನೆಗಳು ಪ್ರಕಟವಾಗಿದೆ. 25 ರಿಂದ 40 ವರ್ಷ ವಯಸ್ಸಿನೊಳಗಿನ 303 ಆರೋಗ್ಯವಂತ ಹಾಗೂ ಲೈಂಗಿಕವಾಗಿ ಸಕ್ರಿಯರಾಗಿದ್ದ ವಿವಾಹಿತ ಪುರುಷರ ಮೇಲೆ ಈ ಚುಚ್ಚುಮದ್ದನ್ನು ಪರೀಕ್ಷೆ ಮಾಡಲಾಗಿತ್ತು.

ಈ ಅಧ್ಯಯನದ ಪ್ರಕಾರ, ಈ ಚುಚ್ಚುಮದ್ದು ಗರ್ಭಧಾರಣೆಯ ತಡೆಗಟ್ಟುವಿಕೆಯನ್ನು 99.02 ಪ್ರತಿಶತ ಕಡಿಮೆ ಮಾಡಿದೆ. ಹಾಗೂ ಯಾವುದೇ ಅಡ್ಡಪರಿಣಾಮಗಳು ಸಹ ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read