ನವದೆಹಲಿ: ವಿಭಿನ್ನ ಧ್ವನಿ ಮತ್ತು ಕಂಪನದೊಂದಿಗೆ ತುರ್ತು ಪರಿಸ್ಥಿತಿಯ ಕುರಿತು ನಿಮ್ಮ ಮೊಬೈಲ್‌ನಲ್ಲಿ ಪರೀಕ್ಷಾ ಸಂದೇಶವನ್ನು ನೀವು ಸ್ವೀಕರಿಸಬಹುದು.
ದಯವಿಟ್ಟು ನೀವೇನು ಗಾಬರಿಯಾಗಬೇಡಿ, ಈ ಸಂದೇಶವು ನಿಜವಾದ ತುರ್ತು ಪರಿಸ್ಥಿತಿಯನ್ನು ಸೂಚಿಸುವುದಿಲ್ಲ. ಬದಲಿಗೆ ಯೋಜಿತ ಪ್ರಯೋಗ ಪ್ರಕ್ರಿಯೆಯ ಭಾಗವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ಈ ಸಂದೇಶವನ್ನು ಕಳುಹಿಸುತ್ತಿದೆ.
ತುರ್ತು ಸಂದರ್ಭದಲ್ಲಿ ದೇಶದ ಜನತೆಗೆ ಎಚ್ಚರಿಕೆ ಸಂದೇಶ ನೀಡುವ ಉದ್ದೇಶದಿಂದ ಈಗಾಗಲೇ ಅನೇಕ ಬಾರಿ ಇಂತಹ ಮೆಸೇಜ್ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ.
ಪ್ರಸ್ತುತ ಇಸ್ರೇಲ್ –ಹಮಾಸ್ ಯುದ್ಧದ ಸನ್ನಿವೇಶದಲ್ಲಿಯೂ ಇದೇ ರೀತಿಯ ಸಂದೇಶ ರವಾನಿಸಿ ಸುರಕ್ಷಿತರಾಗಿರುವ ತಿಳಿಸಲಾಗಿದೆ.