ಬೆಂಗಳೂರು : ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ವಿಧವಾ ವೇತನ, ಮೈತ್ರಿ, ಮನಸ್ವಿನಿ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳು ಕಡ್ಡಾಯವಾಗಿ, ಫಲಾನುಭವಿಗಳ ಪಿಂಚಣಿ ಪಡೆಯುತ್ತಿರುವ ಅಂಚೆ ಖಾತೆ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು NPCI MAPPING ಮಾಡಿಸಬೇಕಾಗಿರುತ್ತದೆ.
ಸರ್ಕಾರವು ಫಲಾನುಭವಿಯ ಮಾಶಾಸನವನ್ನು ಆಧಾರ್ ಆಧಾರಿತ DBT (DIRECT BENEFT TRANSFER) ಪಿಂಚಣಿಯನ್ನು ಬ್ಯಾಂಕ್ ಅಥವಾ ಅಂಚೆ ಖಾತೆಗೆ ಪಾವತಿ ಮಾಡುವುದರಿಂದ ಆಧಾರ್ ಲಿಂಕ್ ಮತ್ತು NPCI MAPPING ಮಾಡಿಸದ ಫಲಾನುಭವಿಗಳ ಮಾಶಾಸನ ರದ್ದಾಗುವುದು. ಆದ್ದರಿಂದ ಎಲ್ಲಾ ಫಲಾನುಭವಿಗಳು ಮಾಶಾಸನ ಪಡೆಯುತ್ತಿರುವ ಆಯಾ ಬ್ಯಾಂಕ್ ಹಾಗೂ ಅಂಚೆ ಕಚೇರಿಗೆ ಖುದ್ದಾಗಿ ಸಂಪರ್ಕಿಸಿ ಕಡ್ಡಾಯವಾಗಿ ಆಧಾರ್ ಲಿಂಕ್ ಮತ್ತು NPCI MAPPING ಮಾಡಿಸಬೇಕು.