ಅಂಗಡಿ ಮಾಲೀಕರು, ಉದ್ದೀಮೆದಾರರಿಗೆ ಮುಖ್ಯ ಮಾಹಿತಿ : ಪರವಾನಿಗೆ ಪಡೆಯುವುದು ಕಡ್ಡಾಯ

ಕಲಬುರಗಿ : ಕಲಬುರಗಿ ನಗರದ ಎಲ್ಲಾ ಉದ್ದಿಮೆದಾರರು, ಅಂಗಡಿ ಮಾಲೀಕರು ಕಡ್ಡಾಯವಾಗಿ ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ/ ನವೀಕರಣ ಮಾಡಿಕೊಳ್ಳಬೇಕು. ಇದಕ್ಕೆ ತಪ್ಪಿದ್ದಲ್ಲಿ ಕೆ.ಎಮ್.ಸಿ. ಕಾಯ್ದೆ ೧೯೭೬ರನ್ವಯ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಹೊಸದಾಗಿ ಉದ್ದಿಮೆ ಆರಂಭಿಸುವ, ನವೀಕರಣಕ್ಕಾಗಿ ಅರ್ಜಿದಾರರು ಉದ್ದಿಮೆ ಪರವಾನಿಗೆ ಅರ್ಜಿಯೊಂದಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್, ಬಾಡಿಗೆ ಕರಾರು ಪತ್ರ, ಚಾಲ್ತಿ ವರ್ಷದ ಆಸ್ತಿ ಕರ ಪಾವತಿಸಿದ ರಶೀದಿ (ಇಲ್ಲವಾದಲ್ಲಿ ಉದ್ದಿಮೆ ಪರವಾನಿಗೆ ಶುಲ್ಕದ ಶೇ. ೫೦ ರಷ್ಟು ದಂಡವನ್ನು ವಿಧಿಸಲಾಗುತ್ತದೆ). ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋ ಹಾಗೂ ನಿರಾಪೇಕ್ಷಣಾ ಪತ್ರ/ ಸ್ವಯಂ ಘೋಷಣಾ ಪತ್ರವನ್ನು ಲಗತ್ತಿಸಬೇಕೆಂದು ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read