ಅಲಬಾಮಾದಲ್ಲಿನ ಒಬ್ಬ ಮಹಿಳೆ ಹಂದಿಯ ಅಂಗಾಂಶ ಜೋಡಣೆ ಬಳಿಕ ಅತ್ಯಂತ ದೀರ್ಘಕಾಲ ಬದುಕುಳಿದ ರೋಗಿಯಾಗಿ ಮಾರ್ಪಟ್ಟಿದ್ದು, ಅವರು ಎರಡು ತಿಂಗಳ ಈ ಅದ್ಭುತ ಮೈಲಿಗಲ್ಲನ್ನು ದಾಟಿದ್ದಾರೆ. ಇದು ವೈದ್ಯಕೀಯ ವಿಜ್ಞಾನದಲ್ಲಿ ಒಂದು ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ.
ತಮ್ಮೊಳಗೆ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಅಂಗಾಂಶದೊಂದಿಗೆ ಯಶಸ್ವಿಯಾಗಿ ಬದುಕುತ್ತಿರುವ ಈ ಮಹಿಳೆ ನಿರೀಕ್ಷೆಗಳನ್ನು ಮೀರಿದ್ದಾರೆ. ಅವರು ತಮ್ಮನ್ನು ತಾವು “ಸೂಪರ್‌ವುಮನ್” ಎಂದು ಕರೆದುಕೊಂಡಿದ್ದಾರೆ.
ಇದು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯ ಭವಿಷ್ಯಕ್ಕೆ ಭರವಸೆಯನ್ನು ನೀಡುತ್ತಿದ್ದು, ಅಲ್ಲದೇ ಜೀವ ಉಳಿಸುವ ನವೀನತೆಗಳ ಸಾಧ್ಯತೆಗಳ ಕುರಿತು ಆಶಾದಾಯಕ ಬೆಳವಣಿಗೆಯಾಗಿದೆ.
ಅಲಬಾಮಾ ಮಹಿಳೆ ಟೊವಾನಾ ಲೂನಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಡಯಾಲಿಸಿಸ್‌ನಲ್ಲಿ ಇದ್ದು ಹಂದಿ ಕಿಡ್ನಿ ಜೋಡಣೆ ಬಳಿಕ, ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜೀವ ಉಳಿಸುವ ಅಂಗಾಂಶವನ್ನು ಪಡೆದ ಐದನೇ ವ್ಯಕ್ತಿಯಾದರು.
“ಅವರ ಮೂತ್ರಪಿಂಡದ ಕಾರ್ಯವು ಸಂಪೂರ್ಣವಾಗಿ ಸಾಮಾನ್ಯವಾಗಿದೆ” ಎಂದು NYU ಲ್ಯಾಂಗೋನ್ ಹೆಲ್ತ್‌ನಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮುನ್ನಡೆಸಿದ ಡಾ. ರಾಬರ್ಟ್ ಮಾಂಟ್‌ಗೊಮೆರಿ ಹೇಳಿದ್ದಾರೆ.
ವೈದ್ಯರು ಲೂನಿಯ ಹೊಸ ಮೂತ್ರಪಿಂಡವು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ಭಾವಿಸಿದ್ದು, ಅಂಗಾಂಗ ಕಸಿಗಾಗಿ ಸಾಲಿನಲ್ಲಿ ಕಾಯುತ್ತಿರುವವರಿಗೆ ಹೊಸ ಉಸಿರು ಬರುವಂತೆ ಮಾಡಿದೆ.