alex Certify ಒಡಿಶಾ ರೈಲು ಅಪಘಾತ: ಶವಗಳನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ‘ಬದುಕಿದ್ದೇನೆ’ ಎಂದು ಕೈ ಬೀಸಿದ ಸಂತ್ರಸ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾ ರೈಲು ಅಪಘಾತ: ಶವಗಳನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ‘ಬದುಕಿದ್ದೇನೆ’ ಎಂದು ಕೈ ಬೀಸಿದ ಸಂತ್ರಸ್ತ

ಇತ್ತೀಚೆಗೆ ಒಡಿಶಾದಲ್ಲಿ ನಡೆದ ರೈಲು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತನಿಗೆ ಶವಾಗಾರಕ್ಕೆ ತೆರಳುವ ಮಾರ್ಗದಲ್ಲಿ ಪ್ರಜ್ಞೆ ಮರಳಿದೆ.

ಆತನನ್ನು ಬಿಸ್ವಜಿತ್ ಮಲಿಕ್ ಎಂದು ಗುರುತಿಸಲಾಗಿದ್ದು, ಆತನಿಗೆ ಪ್ರಜ್ಞೆಗೆ ಬಂದಾಗ ಶವಗಳ ಪಕ್ಕದಲ್ಲಿರುವುದು ಗೊತ್ತಾಗಿದೆ. ಮೃತ ದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲು ಟ್ರಕ್‌ ನಲ್ಲಿ ಹಾಕಲಾಗಿದ್ದು, ಅಪಘಾತದ ಸ್ಥಳದಲ್ಲಿ ಆತನಿಗೆ ಪ್ರಜ್ಞೆ ಇಲ್ಲದ್ದರಿಂದ ಮೃತಪಟ್ಟಿರಬಹುದೆಂದು ಟ್ರಕ್ ನಲ್ಲಿ ಹಾಕಲಾಗಿದೆ. ಆದರೆ, ಅವರು ರಕ್ಷಕರ ಕಡೆಗೆ ಕೈ ಬೀಸಿದ್ದು, ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅವರ ತಂದೆ ಹರೆರಾಮ್ ಮಲಿಕ್ ಕೋಲ್ಕತ್ತಾದಲ್ಲಿ ತಿಳಿಸಿದ್ದಾರೆ.

ಬಿಸ್ವಜಿತ್ ಮಲಿಕ್ ತೀವ್ರವಾಗಿ ಗಾಯಗೊಂಡಿದ್ದರೂ ಅಪಘಾತದ ಸ್ಥಳದಲ್ಲಿ ಹಳಿ ತಪ್ಪಿದ ಕೋಚ್‌ ನಿಂದ ಹೊರಬರುವಲ್ಲಿ ಯಶಸ್ವಿಯಾದರು. ಆದರೆ, ರೈಲು ಹಳಿಯಿಂದ ತೆವಳಲು ಯತ್ನಿಸುತ್ತಿದ್ದಾಗ ಪ್ರಜ್ಞೆ ತಪ್ಪಿದ್ದಾರೆ. ಸ್ಥಳದಲ್ಲಿದ್ದ ರಕ್ಷಣಾ ಕಾರ್ಯಕರ್ತರು ಅವನನ್ನು ಸತ್ತಿದ್ದಾನೆಂದು ತಪ್ಪಾಗಿ ಭಾವಿಸಿ ಇತರ ಮೃತ ದೇಹಗಳೊಂದಿಗೆ ಟ್ರಕ್‌ನಲ್ಲಿ ಎಸೆದರು. ಬಿಸ್ವಜಿತ್ ಟ್ರಕ್‌ ನಲ್ಲಿದ್ದಾಗ ಪ್ರಜ್ಞೆಯನ್ನು ಮರಳಿ ಪಡೆದು ರಕ್ಷಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದರು ಎಂದು ಕೋಲ್ಕತ್ತಾದಲ್ಲಿ ಕಬ್ಬಿಣದ ವ್ಯಾಪಾರಿಯಾಗಿ ಕೆಲಸ ಮಾಡುವ ಅವರ ತಂದೆ ಹೇಳಿದರು.

ಬಲಗೈಗೆ ಗಾಯವಾಗಿದ್ದರೂ ಎಡಗೈ ಸರಿಯಾಗಿಯೇ ಇದ್ದುದರಿಂದ ಅವರು ಬೀಸಲಾರಂಭಿಸಿ ರಕ್ಷಣಾ ಸಿಬ್ಬಂದಿಯ ಗಮನ ಸೆಳೆದರು ಎಂದು ಬಿಸ್ವಜಿತ್ ತಂದೆ ತಿಳಿಸಿದ್ದಾರೆ. ಸದ್ಯ ಬಿಸ್ವಜಿತ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರು, ಅವರ ಕೈ ಮುರಿದಿದ್ದು, ಕಾಲಿಗೂ ಗಾಯವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವಾರ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 1,170 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...