ಬೆಂಗಳೂರು: ಬೆಂಗಳೂರಿನ ಬೆಳ್ಳಂದೂರು ಬಳಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳ-ಎನ್.ಐ.ಎ ತನಿಖೆ ಚುರುಕುಗೊಳಿಸಿದ್ದು, ಈ ವೇಳೆ ಹಲವು ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿವೆ.
ಬೆಳ್ಳಂದೂರು ಬಳಿ 24 ಜನ ಬಂಗ್ಲಾ ವಲಸಿಗರು ಪತ್ತೆಯಾಗಿದ್ದರು. ಆರಂಭದಲ್ಲಿ ಕೇವಲ ಮೂವರು ಬಾಂಗ್ಲಾ ವಲಸಿಗರು ಅಕ್ರಮವಾಗಿ ನೆಲೆಸಿದ್ದಾರೆ ಎಂಬುದು ಪತ್ತೆಯಾಗಿತ್ತು. ಆದರೆ ಎನ್.ಐ.ಎ ಅಧಿಕಾರಿಗಳು ನಡೆಸಿದ ತನಿಖೆ ವೇಳೆ 24 ಬಾಂಗ್ಲಾ ವಲಸಿಗರು ಅಕ್ರಮವಾಗಿ ಎಲೆಸಿರುವುದು ತಿಳಿದುಬಂದಿದೆ.
ಇವರೆಲ್ಲರೂ 2011ರಿಂದಲೂ ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬ್ರೋಕರ್ ಒಬ್ಬನಿಗೆ ಹಣ ನೀಡಿ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದು ಅಲ್ಲದೇ ಬೆಂಗಳೂರಿಗೆ ಬಂದು ವಾಸವಾಗಿದ್ದಾರೆ.
ಬಾಂಗ್ಲಾ ಪ್ರಜೆಗಳು ತಲಾ 20 ಸಾವಿರ ರೂಪಾಯಿ ಹಣವನ್ನು ಬ್ರೋಕರ್ ಗೆ ಕೊಟ್ಟು ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದಿದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ.