ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪದವೀಧರನೊಬ್ಬ ವಿದ್ಯಾರ್ಥಿಗಳಿಗೆ ಗಣಿತವನ್ನು ಕಲಿಸಲು ಬಹುರಾಷ್ಟ್ರೀಯ ಕಂಪೆನಿಯಲ್ಲಿನ ಹೆಚ್ಚಿನ ಸಂಬಳದ ಕೆಲಸವನ್ನು ತೊರೆದಿದ್ದು, ಅವರ ಕಥೆ ಅಂತರ್ಜಾಲದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ.
ಟ್ವಿಟ್ಟರ್ ಬಳಕೆದಾರರಾದ ರಾಹುಲ್ ರಾಜ್ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ, ಶ್ರವಣ್ ಎನ್ನುವವರು “ಗಣಿತದ ಮೇಧಾವಿ” ಎಂದು ಅವರು ಕರೆದಿದ್ದಾರೆ. ಇವರು ಗಣಿತವನ್ನು ಕಲಿಸಲು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. “ಅವರು ಜೆಇಇ ಅರ್ಹತೆ ಪಡೆದರು ಮತ್ತು ಐಐಟಿ ಗುವಾಹಟಿಯಲ್ಲಿ ಆಯ್ಕೆ ಆಗಿದ್ದರು. ಆದರೆ ಗಣಿತ ಕಲಿಸುವ ಸಲುವಾಗಿ ಹುದ್ದೆ ತೊರೆದರು ಎಂದು ಅವರು ಬರೆದುಕೊಂಡಿದ್ದಾರೆ.
“ಶ್ರವಣ್ ಅವರು ಭಾರತದಲ್ಲಿ ಯಾವುದೇ ಐಐಟಿ ಜೆಇಇ ಕೋಚಿಂಗ್ ತರಗತಿಯಲ್ಲಿ ಅಧ್ಯಾಪಕ ಸ್ಥಾನವನ್ನು ಪಡೆಯಬಹುದು ಮತ್ತು ಕೋಟಿಗಳನ್ನು ಗಳಿಸಲು ಪ್ರಾರಂಭಿಸಬಹುದು, ಆದರೆ ಅವರು ಹಾಗೆ ಮಾಡುತ್ತಿಲ್ಲ. ಮಕ್ಕಳಿಗೆ ಸುಲಭದಲ್ಲಿ ಮನೆಯಲ್ಲಿಯೇ ಕುಳಿತು ಗಣಿತ ಕಲಿಸಲು ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಇದು ಪ್ರಶಂಸನಾರ್ಹ ಎಂದಿದ್ದಾರೆ.
ವಿಡಿಯೋ ಇದಾಗಲೇ 1 ಮಿಲಿಯನ್ ವೀಕ್ಷಣೆ ಗಳಿಸಿದ್ದು, ಶ್ರವಣ್ ಅವರಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.