ಕರಡಿ ಮರ ಹತ್ತಲು ಸಾಧ್ಯವಿಲ್ಲ ಎಂಬ ಮಾತನ್ನು ನೀವು ಕೇಳಿದ್ದು ಅದನ್ನೇ ನಂಬಿರಬಹುದು. ಆದರೆ ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿರುವ ವಿಡಿಯೋ ಈ ನಂಬಿಕೆಯನ್ನ ಸುಳ್ಳಾಗಿಸಿದೆ. ಹಿಮಾಲಯನ್ ಕಪ್ಪು ಕರಡಿ ಮತ್ತು ಅದರ ಮರಿಯು ಮರವನ್ನು ಹತ್ತಿ ಇಳಿಯುವ ವಿಡಿಯೋ ಗಮನಸೆಳೆದಿದ್ದು ಹುಬ್ಬೇರಿಸಿದೆ.
ಕರಡಿಗಳು ಮರಗಳನ್ನು ಹತ್ತಲು ಸಾಧ್ಯವಿಲ್ಲ ಎಂಬ ನಂಬಿಕೆಯ ಆಧಾರದ ಮೇಲೆ ಒಬ್ಬ ವ್ಯಕ್ತಿಯು ಮರವನ್ನು ಏರುವ ಮೂಲಕ ಕರಡಿ ದಾಳಿಯಿಂದ ತಪ್ಪಿಸಿಕೊಳ್ಳುವ ಜನಪ್ರಿಯ ಜಾನಪದ ಕಥೆಗೆ ಈ ವಿಡಿಯೋದಲ್ಲಿನ ದೃಶ್ಯ ತದ್ವಿರುದ್ಧವಾಗಿದೆ.
ವೀಡಿಯೊ ಹಂಚಿಕೊಂಡಿರುವ ಪರ್ವೀನ್ ಕಸ್ವಾನ್ “ಸ್ನೇಹಿತನೊಬ್ಬ ಮರವನ್ನು ಏರುವ ಮೂಲಕ ಕರಡಿಯಿಂದ ತನ್ನ ಜೀವವನ್ನು ಉಳಿಸಿಕೊಂಡ ಕಥೆಯನ್ನು ನೀವೆಲ್ಲರೂ ಕೇಳಿರಬೇಕು. ಇಲ್ಲಿ ಹಿಮಾಲಯದ ಕಪ್ಪು ಕರಡಿ ಮತ್ತು ಅದರ ಮರಿ ನಮ್ಮ ಬಾಲ್ಯವು ಹೇಗೆ ಸುಳ್ಳಾಗಿತ್ತು ಎಂದು ತೋರಿಸುತ್ತದೆ !! ಇದನ್ನು ನಿನ್ನೆ ಸೆರೆಹಿಡಿಯಲಾಗಿದೆ.” ಎಂದು ಪೋಸ್ಟ್ ಮಾಡಿದ್ದಾರೆ.
ವೀಡಿಯೊ ತ್ವರಿತವಾಗಿ ಗಮನ ಸೆಳೆದಿದ್ದು ದಾಖಲೆ ಪ್ರಮಾಣದ ವೀಕ್ಷಣೆ ಗಳಿಸಿದೆ.