ರಾತ್ರಿ ಊಟ ಮಾಡಿದ ತಕ್ಷಣ ಮಲಗುತ್ತೇವೆ. ಇದರಿಂದ ದೇಹದಲ್ಲಿ ಕೊಬ್ಬ ಸಂಗ್ರಹಣೆಯಾಗಿ ದೇಹದ ತೂಕ ಹೆಚ್ಚಾಗುತ್ತದೆ ಹೊಟ್ಟೆ ದಪ್ಪವಾಗುತ್ತದೆ.
ಹಾಗಾಗಿ ಊಟ ಮಾಡಿದ ತಕ್ಷಣ ಈ ಯೋಗಗಳನ್ನು ಅಭ್ಯಾಸ ಮಾಡಿದರೆ ಹೊಟ್ಟೆ ದಪ್ಪವಾಗುವ ಸಮಸ್ಯೆಯನ್ನು ನಿವಾರಿಸಬಹುದು.
*ಗೋಮುಖಾಸನ : ಇದು ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕಾರಿ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ. ಊಟದ ಬಳಿಕ ಈ ಯೋಗ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.
ಮೊದಲು ನೆಲದ ಮೇಲೆ ಕುಳಿತು ನಿಮ್ಮ ಸೊಂಟವನ್ನು ನೇರವಾಗಿ ಇರಿಸಿ. ನಂತರ ಒಂದು ಪಾದವನ್ನು ಇನ್ನೊಂದು ಕಾಲಿನ ಮೇಲೆ ಇರಿಸಿ. ನಿಮ್ಮ ಎಡಗೈಯನ್ನು ಮೊಣಕೈ ಬಗ್ಗಿಸಿ ಭುಜದಿಂದ ಬೆನ್ನಿನ ಹಿಂದೆ ಇರಿಸಿ. ಹಾಗೇ ಬಲಗೈಯನ್ನು ಬೆನ್ನಿನ ಹಿಂಭಾಗದಲ್ಲಿ ಇರಿಸಿ ಎರಡು ಕೈಗಳನ್ನು ಹಿಡಿದುಕೊಳ್ಳಿ, ಆಗ ನಿಮ್ಮ ಬೆನ್ನು ನೇರವಾಗಿರಲಿ.
*ಅರ್ಧಚಂದ್ರಾಸನ : ಇದು ಹೊಟ್ಟೆಯನ್ನು ಹಿಗ್ಗಿಸುವುದರಿಂದ ಇದನ್ನು ಊಟದ ಬಳಿಕ ಮಾಡಿದರೆ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ನೀವು ಚಾಪೆಯ ಮೇಲೆ ನೇರವಾಗಿ ನಿಲ್ಲಿ. ನಿಮ್ಮ ಬಲಗೈಯನ್ನು ನಿಮ್ಮ ಎಡಕ್ಕೆ ಎತ್ತಿ ಬಲಗೈಯಿಂದ ನೆಲವನ್ನು ಸ್ಪರ್ಶಿಸಿ. ಸುಮಾರು 10ನಿಮಿಷದ ಬಳಿಕ ಈ ಸ್ಥಾನವನ್ನು ಬದಲಾಯಿಸಿ.