ಬೆಳ್ಳುಳ್ಳಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದೇನೋ ನಿಜ. ಆದರೆ ನಿಮಗೆ ಈ ಸಮಸ್ಯೆಗಳಿದ್ದರೆ ನೀವು ಬೆಳ್ಳುಳ್ಳಿಯಿಂದ ದೂರವಿರುವುದೇ ಒಳ್ಳೆಯದು.
ರಕ್ತಹೀನತೆ ಅಥವಾ ಹಿಮೋಗ್ಲೋಬಿನ್ ಪ್ರಮಾಣ ದೇಹದಲ್ಲಿ ಕಡಿಮೆ ಇರುವವರು ಬೆಳ್ಳುಳ್ಳಿಯನ್ನು ಸೇವಿಸದಿರುವುದು ಒಳ್ಳೆಯದು. ಇದು ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹಾಗಾಗಿ ರಕ್ತದ ಕೊರತೆ ಹೆಚ್ಚಿ ತಲೆ ತಿರುಗಿ ಬೀಳುವ ಸನ್ನಿವೇಶ ಎದುರಾದೀತು.
ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರು ಅಂದರೆ ಲೋಬಿಪಿ ಸಮಸ್ಯೆ ಇರುವವರು ಬೆಳ್ಳುಳ್ಳಿಯಿಂದ ದೂರವಿರುವುದು ಒಳ್ಳೆಯದು. ಇದರ ಸೇವನೆಯಿಂದ ನಿಮ್ಮ ರಕ್ತದೊತ್ತಡ ಪ್ರಮಾಣ ಮತ್ತಷ್ಟು ಕಡಿಮೆಯಾಗಿ ಸಮಸ್ಯೆಯಾದೀತು.
ಬೆಳ್ಳುಳ್ಳಿ ಉಷ್ಣ ಹೆಚ್ಚಿಸುವ ಪದಾರ್ಥವಾದ್ದರಿಂದ ಮಲಬದ್ಧತೆ ಸಮಸ್ಯೆ ಇರುವವರು ಮತ್ತು ಸದಾ ಗ್ಯಾಸ್ಟ್ರಿಕ್ ಸಮಸ್ಯೆಗೆ ಒಳಗಾಗುವವರು ಇದನ್ನು ಅತೀಯಾಗಿ ಸೇವಿಸದೇ ಇರುವುದು ಒಳ್ಳೆಯದು.