ಈಗ ಎಲ್ಲರಿಗೂ ತೂಕ ಇಳಿಕೆ ಮಾಡುವುದೇ ಚಿಂತೆ. ಏನೇ ತಿಂದರೂ ಇದರಲ್ಲಿ ಎಷ್ಟು ಕ್ಯಾಲೋರಿ ಇದೆ, ಎಷ್ಟು ಪ್ರೋಟಿನ್ ಇದೆ ಎಂದು ಅಳೆದು ತೂಗಿ ತಿನ್ನುತ್ತಾರೆ. ಅಂತವರು ಪೈನಾಪಲ್ ಹಣ್ಣನ್ನು ತಿಂದರೆ ಬೇಗನೆ ತಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಪೈನಾಪಲ್ ಹಣ್ಣನ್ನು ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಪೈನಾಪಲ್ ತಿನ್ನುವುದರಿಂದ ಇದು ನಮ್ಮ ದೇಹದಲ್ಲಿನ ಬೇಡದ ಕೊಬ್ಬನ್ನು ನಿವಾರಿಸುತ್ತದೆ. ಹಾಗೇ ಜೀರ್ಣಕ್ರೀಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಾಂಶ ಹೆಚ್ಚಿದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದಂತೆ ಆಗುತ್ತದೆ. ಹಾಗಾಗಿ ಪದೇ ಪದೇ ಏನಾದರೂ ತಿನ್ನಬೇಕು ಎಂದು ಅನಿಸುವುದಿಲ್ಲ. ಇನ್ನು ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಮುಖ ಹಾಗೂ ಕೂದಲಿನ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.
ಇದರಲ್ಲಿ ಕ್ಯಾಲೋರಿ ಕಡಿಮೆ ಇದ್ದು ನಾರಿನಾಂಶ ಹೇರಳವಾಗಿದೆ. ಡಯೆಟ್ ಮಾಡುವವರಿಗೆ ಈ ಹಣ್ಣು ಹೇಳಿ ಮಾಡಿಸಿದ್ದು. ಊಟಕ್ಕೆ ಒಂದು ಗಂಟೆ ಮೊದಲು ಇದನ್ನು ಸೇವಿಸಿ. ಅಥವಾ ಊಟವಾದ 2 ಗಂಟೆ ನಂತರ ಇದನ್ನು ಸೇವಿಸಿದರೆ ತೂಕ ಇಳಿಕೆಗೆ ಸಹಾಯಕಾರಿಯಾಗುತ್ತದೆ.
ಇದನ್ನು ಜ್ಯೂಸ್, ಸಲಾಡ್, ಸ್ಮೂಥಿ ರೂಪದಲ್ಲಿ ಸೇವಿಸಬಹುದು. ಸ್ನ್ಯಾಕ್ಸ್ ರೀತಿ ಕೂಡ ಇದನ್ನು ಸೇವಿಸಬಹುದು.