ಸಮತೋಲಿತ ಊಟ ಮಾಡುವುದರ ಜತೆಗೆ ಸರಿಯಾದ ಸಮಯದಲ್ಲಿ ಊಟ ಮಾಡುವುದು ಕೂಡ ಅಷ್ಟೇ ಮುಖ್ಯವಾದದ್ದು. ಇಲ್ಲವಾದರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾಗಿ ರಾತ್ರಿ 8 ಗಂಟೆಯೊಳಗೆ ಊಟ ಮಾಡಿ ಈ ಪ್ರಯೋಜನಗಳನ್ನು ಪಡೆಯಿರಿ.
*ರಾತ್ರಿ 8 ಗಂಟೆಯೊಳಗೆ ಊಟ ಮಾಡುವುದರಿಂದ ಕ್ಯಾಲೋರಿ ಸೇವನೆಯನ್ನು ನಿಯಂತ್ರಿಬಹುದು. ಇದು ಚಯಾಪಚಯ ಕ್ರಿಯೆಯನ್ನು ಪ್ರಚೋದಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
* 8 ಗಂಟೆಯೊಳಗೆ ಊಟ ಮಾಡುವುದರಿಂದ ಚೆನ್ನಾಗಿ ನಿದ್ರೆ ಮಾಡಬಹುದು. ಇಲ್ಲವಾದರೆ ಎದೆಯುರಿ ಹಾಗೂ ಅಜೀರ್ಣ ಸಮಸ್ಯೆ ಕಾಡುತ್ತದೆ. ಇದರಿಂದ ನಿದ್ರೆ ಹಾಳಾಗುತ್ತದೆ.
*ನೀವು ತಡವಾಗಿ ಊಟ ಮಾಡಿದರೆ ತಿಂದ ಪದಾರ್ಥಗಳು ಸರಿಯಾಗಿ ಕರಗುವುದಿಲ್ಲ. ಇದು ಕೊಬ್ಬಿನಾಮ್ಲಗಳಾಗಿ ಪರಿವರ್ತನೆಯಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.