ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಡಗ, ಲಾಕೆಟ್ ಗೆ ತನ್ನದೆ ಆದ ಮಹತ್ವವಿದೆ. ಗ್ರಹ, ನಕ್ಷತ್ರದ ಮೇಲೆ ನಾವು ಧರಿಸುವ ಕಡಗ, ಲಾಕೆಟ್ ಪ್ರಭಾವ ಬೀರುತ್ತದೆ. ಹಾಗಾಗಿ ಕಡಗ, ಲಾಕೆಟ್ ಧರಿಸುವ ಮೊದಲು ಕೆಲವೊಂದು ಸಂಗತಿಗಳನ್ನು ಗಮನದಲ್ಲಿಡಬೇಕಾಗುತ್ತದೆ.
ಯಾವಾಗ್ಲೂ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿ ಕಡಗವನ್ನು ಮಾತ್ರ ಧರಿಸಬೇಕು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದು ಲಾಭಕರ.
ಹಿತ್ತಾಳೆ ಕಡಗ ಧರಿಸುವುದ್ರಿಂದ ಗುರು, ತಾಮ್ರ ಧರಿಸುವುದ್ರಿಂದ ಮಂಗಳ ಹಾಗೂ ಬೆಳ್ಳಿ ಕಡಗ ಧರಿಸುವುದ್ರಿಂದ ಚಂದ್ರ ಗ್ರಹಗಳು ಬಲಗೊಳ್ಳುತ್ತವೆ.
ಅಪ್ಪಿತಪ್ಪಿಯೂ ಕಬ್ಬಿಣ, ಸ್ಟೀಲ್, ಜರ್ಮನ್ ಬಳೆಯನ್ನು ಧರಿಸಬಾರದು. ಹಾಗೆ ಕಡಗ ಧರಿಸಿದ ನಂತ್ರ ಮದ್ಯಪಾನ ಮಾಡಬಾರದು. ಇದು ಮನುಷ್ಯನ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.
ಹಿತ್ತಾಳೆ, ತಾಮ್ರ ಮಿಶ್ರಿತ ಕಡಗ ಧರಿಸುವುದ್ರಿಂದ ವ್ಯಕ್ತಿಯ ಮೇಲೆ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ.
ಕಡಗ ಧರಿಸುವುದ್ರಿಂದ ವ್ಯಕ್ತಿ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳಿಗೆ ಬೆಳ್ಳಿ ಕಡಗ ಹಾಕುವುದ್ರಿಂದ ಅವ್ರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ.
ಮಕ್ಕಳು ಚಂಚಲ ಗುಣವನ್ನು ಹೊಂದಿರುತ್ತಾರೆ. ಅವ್ರ ಮನಸ್ಸು ಬದಲಾಗುತ್ತಿರುತ್ತದೆ. ಅವ್ರ ಮನಸ್ಸಿನ ಮೇಲೆ ನಿಯಂತ್ರಣ ಹೇರಲು ಬೆಳ್ಳಿ ಲಾಕೆಟ್ ಹಾಕಬೇಕು.
ಮಕ್ಕಳಿಗೆ ಬೆಳ್ಳಿಯ ಅರ್ಧ ಚಂದ್ರ ಆಕಾರದ ಲಾಕೆಟ್ ಹಾಕುವುದ್ರಿಂದ ಆರೋಗ್ಯ ಸರಿಯಾಗಿರುತ್ತದೆ.
ದೇವಾನುದೇವತೆಗಳ ಲಾಕೆಟ್ ಧರಿಸದಿರುವುದು ಒಳ್ಳೆಯದು.