ಅತಿಯಾದ್ರೆ ಅಮೃತವೂ ವಿಷ. ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ಅವಶ್ಯಕವಾಗಿರುವ ಸಂಗತಿಗಳು ಅತಿಯಾದ್ರೆ ಒಳ್ಳೆಯದಲ್ಲ. ಇದು ಅನುಕೂಲವಾಗುವ ಬದಲು ಹಾನಿಯನ್ನುಂಟು ಮಾಡುತ್ತದೆ.
ಶಾರೀರಿಕ ಸಂಬಂಧ ಆರೋಗ್ಯ ವೃದ್ಧಿಯನ್ನುಂಟು ಮಾಡುತ್ತದೆ. ನಿಯಮಿತವಾಗಿ ಶಾರೀರಿಕ ಸಂಬಂಧ ಬೆಳೆಸುವುದು ಒಳ್ಳೆಯದು ಎಂದು ಅನೇಕ ಸಂಶೋಧನೆಗಳು ಹೇಳಿವೆ. ಆದ್ರೆ ಮಿತಿ ಮೀರಿದ್ರೆ ಅಪಾಯ ನಿಶ್ಚಿತ. ಮಹಿಳೆಯರ ಆರೋಗ್ಯದ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ.
ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಬೇಕೇಬೇಕು. ದೇಹವನ್ನು ಫಿಟ್ ಆಗಿಡಲು ಹುಡುಗರು ಜಿಮ್ ನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಾರೆ. ಆದ್ರೆ ಹೆಚ್ಚು ವ್ಯಾಯಾಮ ಮಾಡುವುದರಿಂದ ಹೃದಯ ಸಮಸ್ಯೆ ಶೇಕಡಾ 50 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ದಿನವಿಡಿ ದಣಿದ ದೇಹ, ಮನಸ್ಸಿಗೆ ನಿದ್ರೆ ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕೆ 8 ಗಂಟೆ ನಿದ್ರೆ ಮಾಡಬೇಕು. ಆದ್ರೆ ನಿದ್ರೆ ಹೆಚ್ಚಾದಲ್ಲಿ ಬೊಜ್ಜು ಬರುವ ಜೊತೆಗೆ ಸೋಮಾರಿತನ ಕಾಡುತ್ತದೆ.
ಪ್ರತಿದಿನ ಸ್ನಾನ ಮಾಡುವುದರಿಂದ ದಣಿವು ಕಡಿಮೆಯಾಗುವ ಜೊತೆಗೆ ಶರೀರ ಸ್ವಚ್ಛವಾಗುತ್ತದೆ. ಹೆಚ್ಚು ಸ್ನಾನ ಮಾಡುವುದರಿಂದ ನಮ್ಮ ದೇಹವನ್ನು ರಕ್ಷಣೆ ಮಾಡುವ ಬ್ಯಾಕ್ಟೀರಿಯಾಗಳು ಸಾವನ್ನಪ್ಪುವುದರಿಂದ ಸಮಸ್ಯೆ ಕಾಡುತ್ತದೆ.