ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ, ಹಸ್ತ ಭವಿಷ್ಯದ ಮೇಲೆ ನಂಬಿಕೆಯಿಡುವವರ ಸಂಖ್ಯೆ ಸಾಕಷ್ಟಿದೆ. ಹಸ್ತದಲ್ಲಿರುವ ರೇಖೆ ಏನನ್ನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಬಹುತೇಕ ಎಲ್ಲರಿಗೂ ಇರುತ್ತದೆ. ನಮ್ಮ ಹಸ್ತದಲ್ಲಿ ಅನೇಕ ಅಕ್ಷರಗಳಿರುತ್ತವೆ. X ಮತ್ತು M ಅಕ್ಷರಗಳು ಅನೇಕರ ಹಸ್ತದಲ್ಲಿ ಕಾಣಬಹುದು. ಆದ್ರೆ H ಅಕ್ಷರ ಬಹಳ ಅಪರೂಪ.
ಹಸ್ತ ಶಾಸ್ತ್ರದ ಪ್ರಕಾರ, ಹಸ್ತದಲ್ಲಿ ಮೂರು ರೇಖೆಗಳ ಸಹಾಯದಿಂದ H ಅಕ್ಷರ ಮೂಡಿರುತ್ತದೆ. ಈ ಮೂರು ರೇಖೆಗಳು ನಿಮ್ಮ ಹೃದಯ, ಅದೃಷ್ಟ ಮತ್ತು ಮಿದುಳಿಗೆ ಸಂಬಂಧ ಹೊಂದಿರುತ್ತವೆ. ಈ ಮೂರು ರೇಖೆಗಳು ಕೂಡಿದ್ರೆ ಹಸ್ತದಲ್ಲಿ H ಅಕ್ಷರ ಮೂಡುತ್ತದೆ.
ಶಾಸ್ತ್ರದ ಪ್ರಕಾರ ಹಸ್ತದಲ್ಲಿ H ಅಕ್ಷರವಿದ್ರೆ 40 ವರ್ಷದ ನಂತ್ರ ಆ ವ್ಯಕ್ತಿಗೆ ಯಶಸ್ಸು ಪ್ರಾಪ್ತಿಯಾಗುತ್ತದೆ. ಆ ವ್ಯಕ್ತಿಯ ಜೀವನ 40 ವರ್ಷಗಳ ನಂತ್ರ ಸಂಪೂರ್ಣ ಬದಲಾಗುತ್ತದೆ. ಇದಕ್ಕಿಂತ ಮೊದಲು ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿರುವ ವ್ಯಕ್ತಿ ಆ ನಂತ್ರದ ದಿನಗಳಲ್ಲಿ ಸುಖ ಜೀವನ ಕಾಣುತ್ತಾನೆ. ಆದಾಯ ಹೆಚ್ಚಾಗುವ ಜೊತೆ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಸ್ವಭಾವದಲ್ಲಿ ಈ ವ್ಯಕ್ತಿಗಳು ಹೆಚ್ಚು ಭಾವನಾತ್ಮಕವಾಗಿರುತ್ತಾರೆ. ಪೂರ್ವಾಪರ ಆಲೋಚನೆ ಮಾಡದೆ ಬೇರೆಯವರಿಗೆ ಸಹಾಯ ಮಾಡುತ್ತಾರೆ.