ಪೂಜಾ ಕೋಣೆಯಲ್ಲಿ ಇವುಗಳಿದ್ದರೆ ʼಆರ್ಥಿಕʼ ಸಮೃದ್ಧಿ ನಿಶ್ಚಿತ

ದೇವರ ಅನುಗ್ರಹ ಬಯಸುವ ಪ್ರತಿಯೊಬ್ಬರು ಮನೆಯಲ್ಲಿ ಪೂಜಾ ಕೋಣೆಯನ್ನು ಸುಂದರವಾಗಿ ಇಟ್ಟುಕೊಂಡಿರ್ತಾರೆ. ಶಾಸ್ತ್ರದ ಪ್ರಕಾರ ಪೂಜೆ ಮಾಡುವ ಸ್ಥಳದಲ್ಲಿ 5 ವಸ್ತುಗಳು ಇರಲೇಬೇಕು. ಇವು ಇದ್ದಲ್ಲಿ ಮಾತ್ರ ನಿಮಗೆ ಹಣಕಾಸಿನ ಸಮೃದ್ಧಿ ದೊರೆಯುತ್ತದೆ. ಹಾಗಿದ್ರೆ ಆ 5 ವಸ್ತುಗಳು ಯಾವುವು ಅನ್ನೋದನ್ನು ನೋಡೋಣ.

ಗಂಟೆ : ಗಂಟೆಯ ಸದ್ದು ಮನೆಯಲ್ಲಿ ಸಕಾರಾತ್ಮಕತೆಯನ್ನು ಪಸರಿಸುತ್ತದೆ. ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಹಾಗಾಗಿ ಪೂಜೆಯ ಸ್ಥಳದಲ್ಲಿ ಗಂಟೆಯನ್ನು ಇಟ್ಟುಕೊಳ್ಳಿ.

ಪೂಜೆಗೆ ಬಳಸುವ ಗಂಟೆಯಲ್ಲಿ ಕ್ಯಾಡ್ಮಿಯಂ, ಸೀಸ, ಕಂಚು, ತಾಮ್ರ, ಸತು, ನಿಕ್ಕಲ್ ಮತ್ತು ಮ್ಯಾಂಗನೀಸ್ ಅಂಶವಿರುತ್ತದೆ. ಈ ಗಂಟೆಯ ಸದ್ದು ಮೆದುಳಿನ ಎರಡೂ ಬದಿಯ ಮಧ್ಯೆ ಸಾಮರಸ್ಯ ಮೂಡಿಸುತ್ತದೆ. ಗಂಟೆಯನ್ನು ಸರಿಯಾಗಿ ಬಾರಿಸುವುದರಿಂದ ಅದೃಷ್ಟಕ್ಕೆ ಇರುವ ಅಡ್ಡಿ ದೂರವಾಗುತ್ತದೆ.

ಕಲಶ : ಇದು ಏಳಿಗೆಯ ಸಂಕೇತ. ನೀವು ಕಲಶವನ್ನು ಇಡುವ ಸ್ಥಳದಲ್ಲಿ ಕುಂಕುಮದಿಂದ 8 ಎಸಳುಗಳ ಕಮಲದ ಹೂವನ್ನು ಬಿಡಿಸಿ. ಇದರಿಂದ ಕುಟುಂಬದಲ್ಲಿ ಸಂತೋಷ ಹೆಚ್ಚುತ್ತದೆ.

ಸ್ವಸ್ಥಿಕ್ : ಇದು ಶಕ್ತಿಯ ಸಂಕೇತ. ಅದೃಷ್ಟ ಮತ್ತು ಆರೋಗ್ಯಕ್ಕೂ ಇದು ಪೂರಕವಾಗಿದೆ. ಹಾಗಾಗಿ ಲೋಹದ ಸ್ವಸ್ಥಿಕ್ ಒಂದನ್ನು ಸದಾ ನಿಮ್ಮ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಿ.

ಶಂಖ : ಸಮುದ್ರ ಮಥನದ ಸಂದರ್ಭದಲ್ಲಿ ಉದ್ಭವಿಸಿದ ಲಕ್ಷ್ಮಿಯ ಆಭರಣ ಶಂಖ. ಲಕ್ಷ್ಮಿಗೆ ಶಂಖ ಅತ್ಯಂತ ಪ್ರಿಯವಾದದ್ದು. ಹಾಗಾಗಿ ಪೂಜಾ ಸ್ಥಳದಲ್ಲಿ ಅದನ್ನು ಇಟ್ಟರೆ ಒಳಿತಾಗುತ್ತದೆ.

ಮಣ್ಣಿನ ದೀಪ : ದೇವರ ಕೋಣೆಯಲ್ಲಿ ಮಣ್ಣಿನ ದೀಪವನ್ನಿಡುವುದು ಅತ್ಯಂತ ಶ್ರೇಷ್ಠ. ದೀಪ ಬೆಳಗಿಸುವ ಮುನ್ನ ಬತ್ತಿಯನ್ನು ತುಪ್ಪದಲ್ಲಿ ಅದ್ದಿ. ದೀಪದಲ್ಲಿ ಸ್ವಲ್ಪ ಬೆಲ್ಲ ಹಾಕಿ. ಇದರಿಂದ ಮನೆಗೆ ಶ್ರೇಯಸ್ಸು ಉಂಟಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read