ಒಡವೆ ಅಂದರೆ ಮೊದಲೆಲ್ಲಾ ಅದು ಚಿನ್ನ ಅಥವಾ ಬೆಳ್ಳಿಯದೇ ಆಗಿತ್ತು. ಆದರೀಗ ಚಿನ್ನ ಬೆಳ್ಳಿಯನ್ನು ಮೀರಿಸುವಂತಹ ಒಡವೆಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಒಂದು ಕಾಲದ ಆಗರ್ಭ ಶ್ರೀಮಂತಿಕೆಯ ಸಂಕೇತವಾಗಿದ್ದ ‘ಕಾಸಿನ ಸರ’ ಈಗ ಚಿನ್ನವೇ ಅಲ್ಲದೆ ಇತರ ಲೋಹಗಳಲ್ಲೂ ಹೆಂಗಳೆಯರ ಕೊರಳಿಗೆ ಅಲಂಕಾರವಾಗಿದೆ.
ಒತ್ತು ಕಾಸಿನ ಸರಕ್ಕಿಂತ ವಿರಳವಾಗಿ ಅಲ್ಲಲಿ ಕಾಸನ್ನು ಬಳಸಿ ಮದ್ಯೆ ಅಲಂಕಾರಿಕ ಮಣಿಗಳಿಂದ ಪೋಣಿಸಿ ಎಲ್ಲಾ ಸೀರೆ ಮಾತ್ರವಲ್ಲದೆ ಕುರ್ತಾ ಹಾಗೂ ಕ್ಯಾಶುಯಲ್ ವೇರ್ ಗಳಲ್ಲೂ ಕಣ್ಮನ ಸೆಳೆಯುತ್ತಿದೆ.
ಹಳೆಯ ಒಂದು, ಐದು, ಹತ್ತು ಪೈಸೆಗಳೂ ಈಗ ಟ್ರೆಂಡಿ ಕಾಸಿನ ಸರದ ರೂಪ ಪಡೆದುಕೊಂಡಿದೆ.
ಕಾಸುಗಳಿಂದ ಕೇವಲ ಸರವಷ್ಟೆ ಅಲ್ಲ, ಉಂಗುರ, ಓಲೆಗಳನ್ನು ಹೊಂದಿಸಿ ಧರಿಸಬಹುದು.
ಫ್ಯಾಷನ್ ಜಗತ್ತು ಬಹಳ ದೊಡ್ಡದು. ಇಲ್ಲಿ ಇತಿಹಾಸದ ಪುಟಕ್ಕೆ ಸರಿದ ಹಳೆಯ ನಾಣ್ಯಗಳಿರಬಹುದು, ಮರದಿಂದ ಉದುರಿದ ಒಣ ಎಲೆಯಿರಬಹುದು, ಹಕ್ಕಿ ಹಾರುವಾಗ ಉದುರಿಸಿದ ಪುಕ್ಕವೆ ಇರಬಹುದು ಎಲ್ಲವನ್ನೂ ಫ್ಯಾಷನ್ ಎಂಬ ಜಗತ್ತು ತನ್ನ ಒಡಲಲ್ಲಿ ಸೇರಿಸಿಕೊಂಡು ಹೊಸ ರೂಪ, ಮೆರುಗನ್ನು ಕೊಟ್ಟು ನಿರಂತರವಾಗಿ ಸೆಳೆಯುವ ಸಾಮರ್ಥ್ಯವಿದೆ.