ಪ್ರೀತಿಸುವುದು ಸುಲಭ. ಅದನ್ನು ನಿಭಾಯಿಸುವುದು ಸುಲಭವಲ್ಲ. ಜೀವನದಲ್ಲಿ ಅನೇಕರು ಪ್ರೀತಿ ಹುಡುಕಾಟ ನಡೆಸುತ್ತಾರೆ. ಆದ್ರೆ ಸಿಕ್ಕ ಪ್ರೀತಿಯನ್ನು ನಿಭಾಯಿಸಲು ಕಷ್ಟಪಡ್ತಾರೆ. ಮದುವೆ ಸಂದರ್ಭದಲ್ಲಿ ಪ್ರೀತಿ ಹಾಗೂ ನಿಶ್ಚಲತೆ ಬಹಳ ಮುಖ್ಯ. ಮದುವೆಯಾದ ಮೊದಲ ವರ್ಷ ಸಂಗಾತಿ ಪ್ರೀತಿ ನಿವೇದನೆಯ ಒಂದು ಅವಕಾಶವನ್ನೂ ಬಿಡುವುದಿಲ್ಲ.
ನಂತ್ರದ ದಿನಗಳಲ್ಲಿ ಕೆಲಸ, ಜಬಾವ್ದಾರಿ ಹೆಚ್ಚಾದಂತೆ ಸಂಗಾತಿಗೆ ನೀಡುವ ಸಮಯ ಕಡಿಮೆಯಾಗುತ್ತದೆ. ದಾಂಪತ್ಯದಲ್ಲಿ ಪ್ರೀತಿ ಕೊರತೆ ಎದುರಾಗುತ್ತದೆ. ಪ್ರೀತಿಯನ್ನು ಸದಾ ಹಸಿರಾಗಿಟ್ಟುಕೊಳ್ಳಬೇಕೆಂದ್ರೆ ಕೆಲವೊಂದು ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಅವಕಾಶ ಸಿಕ್ಕಾಗೆಲ್ಲ, ಸಂಗಾತಿಯನ್ನು ನೀವೆಷ್ಟು ಪ್ರೀತಿ ಮಾಡ್ತೀರಿ ಎಂಬುದನ್ನು ಹೇಳಲು ಮರೆಯದಿರಿ. ‘ಐ ಲವ್ ಯು’ ಒಂದು ಮ್ಯಾಜಿಕ್ ಶಬ್ಧ. ಸಂಗಾತಿ ಕಿವಿಗೆ ಈ ಶಬ್ಧ ಬೀಳ್ತಿದ್ದಂತೆ ಅವ್ರ ಮನಸ್ಸಿನಲ್ಲಿ ಮತ್ತೆ ಪ್ರೀತಿ ಚಿಗುರೊಡೆಯುತ್ತದೆ. ಮದುವೆಯಾಗಿದೆ ಎಂದ್ರೆ ಪ್ರೀತಿ ನಿವೇದನೆ ಮಾಡಬಾರದು ಎಂದರ್ಥವಲ್ಲ. ಸಮಯ ಸಿಕ್ಕಾಗ ಬೇರೇನೂ ಆಲೋಚನೆ ಮಾಡದೆ ಲಜ್ಜೆ ಬಿಟ್ಟು, ಸಂಗಾತಿ ಮುಂದೆ ಪ್ರೀತಿ ತೋಡಿಕೊಳ್ಳಿ.
ಅನೇಕ ಕೆಲಸ, ಜವಾಬ್ದಾರಿ ಸಂಗಾತಿಯನ್ನು ದೂರ ಮಾಡುವುದುಂಟು. ಆದ್ರೆ ಇವೆಲ್ಲದರ ಮಧ್ಯೆ ಸಿಗುವ ಸಮಯದಲ್ಲೇ ಸಂಗಾತಿಯನ್ನು ಹೊಗಳಿ. ಅವ್ರ ಕೆಲಸಕ್ಕೂ ಮೆಚ್ಚುಗೆ ವ್ಯಕ್ತಪಡಿಸಿ.