
ಬೈರುತ್ : ಗಾಝಾ ಮೇಲೆ ಇಸ್ರೇಲ್ ನ ಬಾಂಬ್ ದಾಳಿ ಮುಂದುವರಿದರೆ, ಯುದ್ಧವು “ಇತರ ರಂಗಗಳಲ್ಲಿ” ಪ್ರಾರಂಭವಾಗಬಹುದು ಎಂದು ಇರಾನ್ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್ ಅಮಿರಬ್ಡೊಲ್ಲಾಹಿಯಾನ್ ಗುರುವಾರ ಹೇಳಿದ್ದಾರೆ.
ಗುರುವಾರ ಸಂಜೆ ಬೈರುತ್ಗೆ ಆಗಮಿಸಿದ ಅಮಿರಬ್ಡೊಲ್ಲಾಹಿಯಾನ್ ಅವರನ್ನು ಲೆಬನಾನ್ ಅಧಿಕಾರಿಗಳೊಂದಿಗೆ ಹಮಾಸ್ ಮತ್ತು ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಪ್ರತಿನಿಧಿಗಳು ಸ್ವಾಗತಿಸಿದರು. ಗಾಝಾ ಮೇಲಿನ ನಿರಂತರ ಆಕ್ರಮಣ, ಯುದ್ಧಾಪರಾಧಗಳು ಮತ್ತು ಮುತ್ತಿಗೆಯ ಬೆಳಕಿನಲ್ಲಿ, ಇತರ ರಂಗಗಳನ್ನು ತೆರೆಯುವುದು ನಿಜವಾದ ಸಾಧ್ಯತೆಯಾಗಿದೆ” ಎಂದು ಅಮಿರಬ್ಡೊಲ್ಲಾಹಿಯಾನ್ ತಮ್ಮ ಆಗಮನದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.
ಗುರುವಾರ ಮುಂಜಾನೆ, ಅಮಿರಬ್ಡೊಲ್ಲಾಹಿಯಾನ್ ಇರಾಕ್ಗೆ ಭೇಟಿ ನೀಡಿದ್ದರು, ಅಲ್ಲಿ ಅವರು ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರೊಂದಿಗಿನ ಸಭೆಯ ನಂತರ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು.