ಹೈದರಾಬಾದ್: ಪ್ರಯಾಣಿಕನೊಬ್ಬ ವಿಮಾನ ಹೈಜಾಕ್ ಆಗಿದೆ ಎಂದು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶ ರವಾನಿಸಿದ್ದು, ಕೆಲ ಕಾಲ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನಾಮಧೇಯ ವ್ಯಕ್ತಿ ಬೆದರಿಕೆ ಇ-ಮೇಲ್ ಕಳುಹಿಸಿದ್ದಾನೆ. ಈಗಾಗಲೇ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿರುವ ವ್ಯಕ್ತಿ ವಿಮಾನ ಹೈಜಾಕರ್ ಆಗಿದ್ದಾನೆ ಎಂದು ಬರೆಯಲಾಗಿತ್ತು.
ದುಬೈಗೆ ಪ್ರಯಾಣ ಮಾಡಲಿರುವ ವಿಮಾನ AI951 ಬಗ್ಗೆ ಎಚ್ಚರ ವಹಿಸುವಂತೆ ಇ-ಮೇಲ್ ನಲ್ಲಿ ತಿಳಿಸಲಾಗಿತ್ತು. ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಓರ್ವ ಪ್ರಯಾಣಿಕ ಪಾಕಿಸ್ತಾನದ ಗೂಢಾಚಾರಿ ಎಜೆನ್ಸಿ ಐಎಸ್ ಐ ಗೆ ಸೇರಿದವ. ಹಾಗಾಗಿ ಹಲವು ಪ್ರಯಾಣಿಕರು ಎಚ್ಚರಿಕೆ ಇಂದ ಇರಿ ಎಂದು ಸಂಜೆ 7 ಗಂಟೆ ಸೂಮಾರಿಗೆ ಏರ್ ಪೋರ್ಟ್ ಗೆ ಮೇಲ್ ಬಂದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ವಿಮಾನ ನಿಲ್ದಾಣದ ಪೊಲೀಸರು ಹಾಗೂ ಸಿಬ್ಬಂದಿಗಳು ಇ- ಮೇಲ್ ನಲ್ಲಿ ಉಲ್ಲೇಖಿಸಿರುವ ವಿಮಾನದಲ್ಲಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆತನ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗಿದೆ. ಘಟನೆಯಿಂದಾಗಿ ಕೆಲ ಕಾಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿಯೂ ವ್ಯತ್ಯಯವಾಯಿತು.