ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ಸಾವಿನಲ್ಲಿಯೂ ದಂಪತಿ ಒಂದಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಪತಿ ಕೂಡ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಕಾರಣ ಬಿ. ಅಮರಮ್ಮ(57) ನಿಧನರಾಗಿದ್ದು, ಅವರ ನಿಧನದ ಕೆಲವು ಗಂಟೆಗಳ ನಂತರ ಪತಿ ಬಿ. ರಾಜಶೇಖರ(60) ಅವರೂ ಮೃತಪಟ್ಟಿದ್ದಾರೆ.
ಕೆಲವು ತಿಂಗಳಿಂದ ಪಾರ್ಶ್ವವಾಯುನಿಂದ ಬಳಲುತ್ತಿದ್ದ ಅಮರಮ್ಮ ಗುರುವಾರ ರಾತ್ರಿ ನಿಧನರಾಗಿದ್ದು, ಪತ್ನಿಯ ಸಾವಿನಿಂದ ಆತ್ಮಸ್ಥೈರ್ಯ ಕಳೆದುಕೊಂಡ ರಾಜಶೇಖರ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತ ದಂಪತಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಒಮ್ಮೆಲೇ ಇಬ್ಬರನ್ನೂ ಕಳೆದುಕೊಂಡ ಕುಟುಂಬದವರು, ಸಂಬಂಧಿಕರು, ಗ್ರಾಮಸ್ಥರ ಕಂಬನಿ ಮಿಡಿದಿದ್ದಾರೆ.