ನಿನ್ನೆಯಷ್ಟೇ ಮಹಾರಾಜ ಟ್ರೋಫಿಯ ಸೆಮಿಫೈನಲ್ ಮುಕ್ತಾಯವಾಗಿದ್ದು, ಇಂದು ಹುಬ್ಬಳ್ಳಿ ಟೈಗರ್ಸ್ ಮತ್ತು ಮೈಸೂರು ವಾರಿಯರ್ಸ್ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ.
ನಿನ್ನೆ ನಡೆದ ಮೈಸೂರು ವಾರಿಯರ್ಸ್ ಹಾಗೂ ಗುಲ್ಬರ್ಗ ಮಿಸ್ಟಿಕ್ಸ್ ನಡುವಣ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ 248 ರನ್ ಗಳ ಬೃಹತ್ ಮೊತ್ತ ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದೆ. ನಾಯಕ ಕರುಣ್ ನಾಯರ್ ಸ್ಪೋಟಕ ಬ್ಯಾಟಿಂಗ್ ಗೆ ಗುಲ್ಬರ್ಗ ಮಿಸ್ಟಿಕ್ಸ್ ತತ್ತರಿಸಿ ಹೋಗಿದೆ.
ಮನಿಷ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ಹಾಗೂ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ಈ ಬಾರಿಯ ಮಹಾರಾಜ ಟ್ರೋಪಿಯಲ್ಲಿ ಮುಖಾಮುಖಿಯಾದ ಎರಡು ಪಂದ್ಯಗಳಲ್ಲಿ ಒಂದೊಂದು ಬಾರಿ ಜಯ ಸಾಧಿಸಿವೆ. ಒಟ್ಟಾರೆ ಎರಡು ತಂಡಗಳು ಬಲಿಷ್ಠ ತಂಡಗಳಾಗಿದ್ದು, ನಿನ್ನೆಯಂತೆ ರನ್ ಗಳ ಹೊಳೆಯೇ ಹರಿದು ಬರಲಿವೆ.