ಆರೋಗ್ಯಕರ ಲಿಂಬೆಹಣ್ಣಿನ ಸೂಪ್ ಮಾಡುವ ವಿಧಾನ

ಬಿಸಿ ಬಿಸಿ ಸೂಪ್ ಹೀರುತ್ತಿದ್ದರೆ ಅದರ ಖುಷಿನೇ ಬೇರೆ. ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು. ಅದರಲ್ಲೂ ನಿಂಬೆ ಹಣ್ಣಿನಲ್ಲಿ ವಿಟಮಿನ್ ಹೆಚ್ಚಿರುತ್ತದೆ. ಇಲ್ಲಿ ನಿಂಬೆಹಣ್ಣು, ಕೊತ್ತಂಬರಿಸೊಪ್ಪು ಬಳಸಿ ಮಾಡುವ ಸೂಪ್ ಇದೆ ನೋಡಿ.

ಬೇಕಾಗುವ ಸಾಮಗ್ರಿಗಳು:

1 ಟೇಬಲ್ ಸ್ಪೂನ್ – ನಿಂಬೆಹಣ್ಣಿನ ಜ್ಯೂಸ್, ¼ ಕಪ್ –  ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು, 2 ಟೀ ಸ್ಪೂನ್ – ಕತ್ತರಿಸಿದ ಬೆಳ್ಳುಳ್ಳಿ, 2 ಟೀ ಸ್ಪೂನ್ – ಕತ್ತರಿಸಿದ ಹಸಿಮೆಣಸು, ¼ ಕಪ್ – ಕತ್ತರಿಸಿದ ಈರುಳ್ಳಿ, ¼ ಕಪ್ – ಕತ್ತರಿಸಿದ ಕ್ಯಾಬೇಜ್, ¼ ಕಪ್ – ಕತ್ತರಿಸಿದ ಕ್ಯಾರೆಟ್. 3 ಕಪ್ – ವೆಜಿಟೇಬಲ್ ಸ್ಟಾಕ್, ಉಪ್ಪು – ರುಚಿಗೆ ತಕ್ಕಷ್ಟು, 2 ಟೀ ಸ್ಪೂನ್ ಕಾರ್ನ್ ಫ್ಲೋರ್ ಅನ್ನು 2 ಟೇಬಲ್ ಸ್ಪೂನ್ ನೀರಿನಲ್ಲಿ ಕರಗಿಸಿಟ್ಟುಕೊಳ್ಳಿ, ಎಣ್ಣೆ – 2 ಟೀ ಸ್ಪೂನ್.

ಮಾಡುವ ವಿಧಾನ:

ಒಂದು ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಸಣ್ಣ ಉರಿಯಲ್ಲಿ ತುಸು ಫ್ರೈ ಮಾಡಿಕೊಳ್ಳಿ, ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ, ನಂತರ ಕ್ಯಾಬೇಜ್, ಕ್ಯಾರೆಟ್ ಸೇರಿಸಿ 1 ನಿಮಿಷಗಳ ಕಾಲ ಫ್ರೈ ಮಾಡಿ. ಆಮೇಲೆ ವೆಜಿಟೇಬಲ್ ಸ್ಟಾಕ್, ನಿಂಬೆಹಣ್ಣಿನ ರಸ, ಮಿಕ್ಸ್ ಮಾಡಿಕೊಂಡ ಕಾರ್ನ್ ಫ್ಲೋರ್ ಹಾಕಿ ಹದ ಉರಿಯಲ್ಲಿ 3 ನಿಮಿಷಗಳ ಕಾಲ ಕುದಿಸಿ ನಂತರ ಕೊತ್ತಂಬರಿಸೊಪ್ಪು ಸೇರಿಸಿ ಮಿಕ್ಸ್ ಮಾಡಿ. ಬಿಸಿ ಇರುವಾಗಲೇ ಇದನ್ನು ಸರ್ವ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read