ಭಾರತೀಯ ರೈಲ್ವೇಯಲ್ಲಿ ಸ್ಟಾಫ್ ನರ್ಸ್ ಕೆಲಸ ಮಾಡಲು ಆಸಕ್ತಿ ಹೊಂದಿರುವ ಜನರಿಗೆ ಖುಷಿ ಸುದ್ದಿಯೊಂದಿದೆ. ಶೀಘ್ರದಲ್ಲಿಯೇ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸುವ ಸಾಧ್ಯತೆ ದಟ್ಟವಾಗಿದೆ. ಆರ್ ಆರ್ ಬಿ ಸ್ಟಾಫ್ ನರ್ಸ್ ಹುದ್ದೆಗೆ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆರ್ ಆರ್ ಬಿಯಲ್ಲಿ ನೀವೂ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡಲು ಬಯಸಿದ್ದರೆ ಅದ್ರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವುದು ಮುಖ್ಯ.
ಸ್ಟಾಫ್ ನರ್ಸ್ ಹುದ್ದೆಗೆ ನೀವು ಬ್ಯಾಚುಲರ್ ಆಫ್ ಸೈನ್ಸ್ (ನರ್ಸಿಂಗ್) ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿಯಲ್ಲಿ 3 ವರ್ಷಗಳ ಕೋರ್ಸ್ ಪೂರ್ಣಗೊಳಿಸಿರಬೇಕು. ನಿಮ್ಮ ವಯಸ್ಸು ಹದಿನೆಂಟು ವರ್ಷ ಮೇಲ್ಪಟ್ಟಿದ್ದು, ನಲವತ್ತು ವರ್ಷಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ನೀವು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನೀವು ಹಣ ಪಾವತಿ ಮಾಡಬೇಕಾಗುತ್ತದೆ. ಆನ್ಲೈನ್ ನಲ್ಲಿ ಆರ್ ಆರ್ ಬಿ ಸ್ಟಾಫ್ ನರ್ಸ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಐದು ನೂರು ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 250 ರೂಪಾಯಿ. ಮಾಜಿ ಸೈನಿಕಕರು, ಪಿಡಬ್ಲ್ಯೂಬಿಡಿ, ಮಹಿಳೆಯರು, ಟ್ರಾನ್ಸ್‌ಜೆಂಡರ್, ಅಲ್ಪಸಂಖ್ಯಾತ ಅಭ್ಯರ್ಥಿಗಳು ಕೂಡ ಇಷ್ಟೇ ಹಣ ಪಾವತಿ ಮಾಡಬೇಕು.
ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದಾಖಲೆ ಪರೀಕ್ಷೆ ಮೂಲಕ ನಿಮ್ಮ ಅಯ್ಕೆ ನಡೆಯುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಒಟ್ಟೂ 100 ಅಂಕಗಳಿಗೆ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ನಲವತ್ತರಿಂದ ಆರವತ್ತೆರಡು ಸಾವಿರದವರೆಗೆ ಸಂಬಳವಿರುತ್ತದೆ.