ರೈತರು ತಮ್ಮ ಜಮೀನಿನ ಹಳೆಯ ದಾಖಲೆಗಳನ್ನು ಪಡೆಯಲು ಅಲ್ಲಿ ಇಲ್ಲಿ ಅಲೆಯುವ ಅಗತ್ಯವಿಲ್ಲ…ನೀವು ಬಹಳ ಸುಲಭವಾಗಿ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಂಡು ನಂತರ ಪ್ರಿಂಟ್ ತೆಗೆಯಬಹುದು…ಅದು ಹೇಗೆ ಅಂತೀರಾ..ಇಲ್ಲಿದೆ ನೋಡಿ ಮಾಹಿತಿ.
ನಿಮ್ಮ ಹಳೆಯ ದಾಖಲೆಗಳಾದ ಪೋಡಿ, ಮೂಲ ಸರ್ವೆ, ಜಮೀನಿನ ಮೂಲ ಪುಸ್ತಕ, ಮುಂತಾದ ದಾಖಲೆಗಳು ಯಾವುದೋ ಸಮಯದಲ್ಲಿ ಬೇಕಾಗುತ್ತದೆ. ಆಗ ನೀವು ಸುಲಭವಾಗಿ ಮೊಬೈಲ್ ನಲ್ಲೇ ಡೌನ್ ಲೋಡ್ ಮಾಡಬಹುದು . ಜಮೀನಿನ ಹಳೆಯ ಮಾಲೀಕರು ಯಾರು ಎಂದು ನೀವು ತಿಳಿದುಕೊಳ್ಳಲು ಅಥವಾ ನಿಮ್ಮ ಜಮೀನನ್ನು ಇತರರರಿಗೆ ಮಾರಲು ಹಳೆಯ ದಾಖಲೆ ಪತ್ರ ಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ಟ್ರಿಕ್ಸ್ ಬಳಸಬಹುದು.
ನೀವು ಮಾಡಬೇಕಾದದ್ದು ಇಷ್ಟೇ..!
1) ಮೊದಲು ನಿಮ್ಮ ಮೊಬೈಲ್ ನಲ್ಲಿ ಸರ್ಕಾರದ landrecords.karnataka.gov.in ಗೆ ವೆಬ್ ಸೈಟ್ ಗೆ ಭೇಟಿ ಕೊಡಿ.
2)ನಿಮ್ಮ ಜಮೀನಿನ ಹಳೆಯ ದಾಖಲೆಗಳನ್ನು ನೋಡಲು View RTC And MR ಆಪ್ಷನ್ ಮೇಲೆ ಕ್ಲಿಕ್ ಮಾಡಿ.
3)Karnataka land records image Retrival system ಎನ್ನುವ ಪೇಜ್ ಓಪನ್ ಆಗುತ್ತೆ. ನಂತರ ನಿಮ್ಮ ಮೊಬೈಲ್ ಸಂಖ್ಯೆ ಮೂಲಕ Log in ಆಗಬೇಕು. ನಂತರ ಮೊಬೈಲ್ ನಂಬರ್ ಎಂಟ್ರಿ ಮಾಡಿ Captcha ಎಂಟ್ರಿ ಮಾಡಿ, Send OTP ಮೇಲೆ ಕ್ಲಿಕ್ ಮಾಡಿ, ಬಂದಿರುವ OTP ಎಂಟ್ರಿ ಮಾಡಿನಂತರ ಲಾಗಿನ್ ಆಗಿ.
4) ಇದಾದ ಬಳಿಕ ಹೊಸ ಪೇಜ್ ಒಂದು ಡಿಸ್ ಪ್ಲೇ ಆಗುತ್ತದೆ. ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಎಲ್ಲವನ್ನು ಸೆಲೆಕ್ಟ್ ಮಾಡಿ ನಿಮ್ಮ ಜಮೀನಿನ ಸರ್ವೆ ನಂಬರ್ ಎಂಟ್ರಿ ಮಾಡಿ ಸರ್ಚ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ ಕೂಡಲೇ ಸರ್ವೆ ನಂಬರ್ ನ ಹಳೆ ಕಾಲದ ದಾಖಲೆಗಳು ಮತ್ತು ಈಗಿನ ದಾಖಲೆಗಳನ ಲಿಸ್ಟ್ ಬರುತ್ತದೆ ನಂತರ ಅದರಲ್ಲಿ ಯಾವ ದಾಖಲೆ ಬೇಕು ಅದರ ಮುಂದೆ ಕ್ಲಿಕ್ ಮಾಡಿದರೆ PDF ಫಾರ್ಮ್ ಅಲ್ಲಿ ದಾಖಲೆ ಡೌನ್ಲೋಡ್ ಆಗುತ್ತದೆ. ನೀವು ನಿಮ್ಮ ಮೊಬೈಲ್ ಮೂಲಕ ನೋಡಬಹುದು, ಪ್ರಿಂಟ್ ಬೇಕಾದರೆ ಪ್ರಿಂಟ್ ಔಟ್ ಕೂಡ ಪಡೆದುಕೊಳ್ಳಬಹುದು.