ದಂಗಾಗಿಸುವಂತಿದೆ ಪರಿಣಿತಿ – ರಾಘವ್ ಮದುವೆಯಾದ ಈ ಹೋಟೆಲ್ ಕೋಣೆಯ 1 ದಿನದ ಬಾಡಿಗೆ…!

ಆಪ್​ ನಾಯಕ ರಾಘವ್​ ಚಡ್ಡಾ ಹಾಗೂ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಸೆ. 24ರಂದು ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅತ್ಯಂತ ಅದ್ಧೂರಿ ವಿವಾಹ ಸಮಾರಂಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಭಾಗವಹಿಸಿದ್ದರು.

ವರದಿಗಳ ಪ್ರಕಾರ, ರಾಘವ್​ ಚಡ್ಡಾ ಹಾಗೂ ಪರಿಣಿತಿ ಚೋಪ್ರಾ ಲೀಲಾ ಪ್ಯಾಲೇಸ್​ನ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಕೋಣೆಯನ್ನು ಬುಕ್​ ಮಾಡಿದ್ದರು ಎನ್ನಲಾಗಿದೆ. ಉದಯಪುರದ ಲೀಲಾ ಪ್ಯಾಲೇಸ್​​ ಭಾರತದ ಅತ್ಯಂತ ದುಬಾರಿ ಹೋಟೆಲ್​ಗಳಲ್ಲಿ ಒಂದಾಗಿದೆ. ಹಲವಾರು ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಈ ಹೋಟೆಲ್​ನಲ್ಲಿ ಮದುವೆ ಕಾರ್ಯಕ್ರಮ ಪ್ಲಾನ್​ ಮಾಡುತ್ತಾರೆ.

ಹೋಟೆಲ್​​ನಲ್ಲಿ ರಾತ್ರಿ ತಂಗುವ ಕೋಣೆಗಳು ಸಾವಿರದಿಂದ ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಆದರೆ ಲೀಲಾ ಪ್ಯಾಲೇಸ್​ನಲ್ಲಿ ಅತೀ ಅಗ್ಗದ ಕೋಣೆಯು ಒಂದು ರಾತ್ರಿಗೆ 26,350 ರೂಪಾಯಿ ದರವನ್ನು ಹೊಂದಿದೆ. ಮಹಾರಾಜ ಸೂಟ್​ನ ಬೆಲೆ ಒಂದು ರಾತ್ರಿಗೆ 9 ಲಕ್ಷ ರೂಪಾಯಿ ಆಗಿದೆ. ರಾಘವ್​ ಚಡ್ಡಾ ಹಾಗೂ ಪರಿಣಿತಿ ಚೋಪ್ರಾ ಮದುವೆಯ ದಿನದಂದು ವಾಸ್ತವ್ಯ ಹೂಡಲು ಇದೇ ಕೋಣೆಯನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಪ್ಯಾಲೇಸ್​ನಲ್ಲಿ 1 ಲಕ್ಷ, 3 ಲಕ್ಷ ಹಾಗೂ 5 ಲಕ್ಷ ರೂಪಾಯಿ ಬಾಡಿಗೆಯ ಕೋಣೆಗಳು ಸಹ ಲಭ್ಯವಿದೆ.

ಈ ಅರಮನೆಯ ಹೋಟೆಲ್​​ ವಿವಿಧ ರೀತಿಯ ವೆಡ್ಡಿಂಗ್​ ಪ್ಯಾಕೇಜ್​ ಹೊಂದಿದೆ. ಲೀಲಾ ಪ್ಯಾಲೇಸ್​​ನಲ್ಲಿ ನೀವು ಮದುವೆ ಮಾಡಲು ಬಯಸಿದ್ದರೆ 150 ರಿಂದ 200 ಮಂದಿ ಅತಿಥಿಗಳಿಗೆ 1.6 ಕೋಟಿಯಿಂದ 2.2 ಕೋಟಿ ರೂಪಾಯಿಗಳವರೆಗೆ ಖರ್ಚಾಗುತ್ತದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read