ಪ್ರತಿಜೀವಕ ಔಷಧಿಗಳು ಫಂಗಸ್, ವೈರಸ್ ಹಾಗೂ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳನ್ನ ಹೋಗಲಾಡಿಸಲು ಸಹಾಯ ಮಾಡುತ್ತವೆ.
ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನ ನಾಶ ಮಾಡೋದು ಮಾತ್ರವಲ್ಲದೇ ಅವುಗಳು ಮತ್ತೆ ಬೆಳೆಯದಂತೆ ತಡೆಯಲೂ ಸಹ ಇವುಗಳು ಸಹಕಾರಿಯಾಗಿವೆ. ಆದರೆ ಈ ಪ್ರತಿಜೀವಕ ಔಷಧಿಗಳನ್ನ ಗರ್ಭಿಣಿಯಾದ ಸಂದರ್ಭದಲ್ಲಿ ಸೇವಿಸಬೇಕೇ ಬೇಡವೆ ಎಂಬ ಪ್ರಶ್ನೆ ಅನೇಕರಲ್ಲಿ ಕಾಡೋದು ಸಹಜ. ಗರ್ಭಿಣಿಯರಿಗೆ ಸೋಂಕಿನ ಅಪಾಯ ಹೆಚ್ಚಿರೋದ್ರಿಂದ ಅವರು ಪ್ರತಿಜೀವಕ ಔಷಧಿಗಳನ್ನ ಸೇವಿಸಲೇಬೇಕು.
ಪ್ರತಿಜೀವಕಗಳಿಂದ ವಿಭಿನ್ನವಾದ ಸೈಡ್ ಎಫೆಕ್ಟ್ಗಳಿವೆ. ಕೆಲವೊಂದು ಬಾರಿ ಇವು ಮಗುವಿನ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಬಲ್ಲದು. ಅದರಲ್ಲೂ ಮೊದಲನೇ ತ್ರೈಮಾಸಿಕದಲ್ಲಂತೂ ಇದರ ಅಪಾಯ ತುಸು ಹೆಚ್ಚಾಗಿಯೇ ಇರುತ್ತೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ನಿಯಮಿತವಾದ ಡೋಸೇಜ್ಗಳನ್ನೇ ಪ್ರತಿಜೀವಕಗಳನ್ನ ಸೇವಿಸಬೇಕು.
ಸಾಮಾನ್ಯವಾಗಿ ಕೇವಲ 10 ಪ್ರತಿಶತ ಪ್ರತಿಜೀವಕಗಳು ಗರ್ಭಿಣಿಗೆ ಸುರಕ್ಷಿತ ಎಂದು ಹೇಳಲಾಗಿದೆ. ಹೀಗಾಗಿ ವೈದ್ಯರ ಸಲಹೆಯಿಲ್ಲದೇ ಯಾವುದೇ ಪ್ರತಿಜೀವಕ ಔಷಧಿಗಳನ್ನ ನೀವಾಗಿಯೇ ಸೇವಿಸಲು ಹೋಗದಿರಿ.
ಗರ್ಭಿಣಿಯಾಗಿದ್ದ ವೇಳೆ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತೆ. ಈ ಸಮಯದಲ್ಲಿ ಮಹಿಳೆಗೂ ಸೋಂಕಿನ ಅಪಾಯಗಳು ಇರೋದು ಸಹಜ. ಮೂತ್ರದ ಸೋಂಕು, ಯೋನಿ ಸೋಂಕು, ಕಿವಿ, ಮೂಗು ಹಾಗೂ ಗಂಟಲಿನ ಸೋಂಕುಗಳು ಉಂಟಾದ ಸಂದರ್ಭಗಳಲ್ಲಿ ವೈದ್ಯರು ಆಂಟಿಬಯಾಟಿಕ್ಗಳ ಸೇವನೆಗೆ ಸಲಹೆ ನೀಡುತ್ತಾರೆ.
ಬೀಟಾ ಲ್ಯಾಕ್ಟಮ್, ವಾನೋಮೈಸಿನ್, ನಿಟ್ರೋಫ್ಯುರಟೈನ್, ಮೆಟ್ರೋನಿಡಜೋಲ್, ಕ್ಲಿಂಡಮೈಸಿನ್, ಫಾಸ್ಫೊಮೈಸಿನ್, ಎನ್ಸೆಫಾಲ್, ರೋಸಾಫಿನ್, ಜೆಂಟಾಮೈಸಿನ್, ನಿಯೋಮೈಸಿನ್ ಇತ್ಯಾದಿಗಳನ್ನ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಆದರೂ ವೈದ್ಯರ ಸಲಹೆಯಿಲ್ಲದೇ ಈ ರೀತಿಯ ಯಾವುದೇ ಆಂಟಿಬಯಾಟಿಕ್ಗಳನ್ನ ಸೇವನೆ ಮಾಡೋದು ಒಳ್ಳೆಯದಲ್ಲ.