ಶಸ್ತ್ರಸಜ್ಜಿತ ಡಕಾಯಿತನೊಬ್ಬ ಅಂಗಡಿಯೊಂದಕ್ಕೆ ಕಳ್ಳತನ ಮಾಡಲು ಬಂದಾಗ ಶಾಪ್‌ಕೀಪರ್ ತೋರಿದ ಸಮಯಪ್ರಜ್ಞೆಯಿಂದಾಗಿ ಆತನ ಪ್ರಯತ್ನ ವಿಫಲವಾಗಿದೆ.
ಡರ್ಹಂ ನಗರದ ಶಾಪ್ ಒಂದರಲ್ಲಿ ಈ ಘಟನೆ ಜರುಗಿದೆ. ಮಾಲ್ಕಂ ಟ್ರಿಂಬಲ್ ಹೆಸರಿನ ವ್ಯಕ್ತಿಯೊಬ್ಬ ಶಾಪ್ ಒಳಗೆ ಬಂದು ನಾಲ್ಕು ಪ್ಯಾಕ್‌ನ ಲ್ಯಾಗರ್ ಒಂದನ್ನು ಎತ್ತಿಕೊಂಡಿದ್ದಾನೆ. ಕೂಡಲೇ ಚಾಕುವೊಂದನ್ನು ತೆಗೆದು ಅಂಗಡಿಯಾತನಿಗೆ ಬೆದರಿಸಿದ ಕಳ್ಳನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ವೇಳೆ ಗಾಬರಿಗೊಂಡರೂ ತನ್ನ ತಲೆ ಓಡಿಸಿದ ಶಾಪ್‌ಕೀಪರ್ ನೋಡ ನೋಡುತ್ತಲೇ ಅಂಗಡಿ ಮುಂಬಾಗಿಲನ್ನು ಹೊರಗಿನಿಂದ ಮುಚ್ಚಿ ಹಿಡಿದು, ಶಾಪ್‌ನ ಶಟರ್‌ಗಳನ್ನು ಮುಚ್ಚಲು ಬಟನ್ ಒತ್ತಿದ್ದಾನೆ. ಒಳಗೆ ಸಿಲುಕಿಕೊಂಡ ಟ್ರಿಂಬಲ್ ತನ್ನ ಶಕ್ತಿ ಮೀರಿ ಬಾಗಿಲು ತೆರೆಯಲು ನೋಡಿದ್ದಾನೆ. ಆದರೆ ಕಳ್ಳನಿಗೆ ಅಲ್ಲಿಂದ ಪಾರಾಗಲು ಕಾಲ ಮಿಂಚಿ ಹೋಗಿತ್ತು.
ಸಿಸಿ ಟಿವಿ ಕ್ಯಾಮೆರಾದ ಸಾಕ್ಷ್ಯವಿದ್ದ ಕಾರಣ ಮಾಲ್ಕಂಗೆ ತನ್ನ ಕೃತ್ಯಕ್ಕಾಗಿ ಮೂರು ವರ್ಷ ನಾಲ್ಕು ತಿಂಗಳ ಕಾಲ ಜೈಲಿನಲ್ಲಿ ಇರಬೇಕಾಗಿ ಬಂದಿದೆ.