ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಎಚ್‌ಇಎಲ್‌ನ ನಿವೃತ್ತ ಅಧಿಕಾರಿಯೊಬ್ಬರನ್ನು ಹನಿಟ್ರ್ಯಾಪ್ ಗ್ಯಾಂಗ್ ವಂಚಿಸಿ, ಅವರಿಂದ ಸಾಕಷ್ಟು ಹಣವನ್ನು ಸುಲಿಗೆ ಮಾಡಿದೆ.
ರಷ್ಯಾದ ಮಹಿಳೆಯನ್ನು ಭೇಟಿ ಮಾಡುವ ನೆಪದಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಅಧಿಕಾರಿಗೆ ಆಮಿಷವೊಡ್ಡಿತ್ತು. ಅವರು ಹೋಟೆಲ್‌ನಲ್ಲಿ ತಂಗಿದ್ದ ಸಮಯದಲ್ಲಿ ಅಧಿಕಾರಿ ಮತ್ತು ಮಹಿಳೆಯ ಖಾಸಗಿಯಾಗಿ ಇದ್ದ ಸಮಯದ 27 ವೀಡಿಯೊಗಳನ್ನು ರೆಕಾರ್ಡ್ ಮಾಡಿ ಅವುಗಳನ್ನು ಬಳಸಿಕೊಂಡು ನಿವೃತ್ತ ಅಧಿಕಾರಿಗೆ ಹಣ ಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡಿದರು.
ವೀಡಿಯೋಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಅಧಿಕಾರಿಯು ವಂಚಕರಿಗೆ 1 ಕೋಟಿ ರೂಪಾಯಿ ನೀಡಿದ್ದರು. ಆರಂಭದಲ್ಲಿ ಈ ಗ್ಯಾಂಗ್ ನಿವೃತ್ತ ಅಧಿಕಾರಿಯನ್ನು ಹೋಟೆಲ್‌ಗೆ ಆಹ್ವಾನಿಸಿ ಅವರಿಗೆ ತಿಳಿಯದಂತೆ ವೀಡಿಯೊಗಳನ್ನು ಚಿತ್ರೀಕರಿಸಿದರು. ನಂತರ ವಿಡಿಯೋ ರೆಕಾರ್ಡಿಂಗ್‌ಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದರು. ಗ್ಯಾಂಗ್‌ನ ಒಬ್ಬ ಸದಸ್ಯ ಅಪರಾಧ ವಿಭಾಗದ ಅಧಿಕಾರಿಯಂತೆ ನಟಿಸಿ ಬಂಧಿಸುವುದಾಗಿ ಬೆದರಿಸಿ ಮತ್ತಷ್ಟು ಹಣ ಸುಲಿಗೆ ಮಾಡಿದ್ದಾನೆ.
ನಿರಂತರ ಬೆದರಿಕೆಯಿಂದ ಹತಾಶೆಗೊಂಡ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ಶೀಘ್ರದಲ್ಲೇ ತನಿಖೆಯನ್ನು ಪ್ರಾರಂಭಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ರಷ್ಯಾದ ಮಹಿಳೆ ಸೇರಿದಂತೆ ಶಂಕಿತರನ್ನು ಹುಡುಕುತ್ತಿದ್ದಾರೆ.