ಹೋಂಡಾ ಮೋಟರ್ ಸೈಕಲ್ & ಸ್ಕೂಟರ್ ಇಂಡಿಯಾ ತಮ್ಮ ಬೈಕ್ ಕಲೆಕ್ಷನ್ಗೆ ಮತ್ತೊಂದು ಸೇರ್ಪಡೆ ಮಾಡಿದ್ದು ಡಿಯೋ 125ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಹೋಂಡಾ ಡಿಯೋ 125 ಭಾರತದಲ್ಲಿ 83,400 ರೂಪಾಯಿ ಆರಂಭಿಕ ಮೌಲ್ಯದಲ್ಲಿ ಲಭ್ಯವಿದೆ.
ಆಕ್ಟಿವಾ 125 ಹಾಗೂ ಗ್ರಾಜಿಯಾದ ಬಳಿಕ ದೇಶದಲ್ಲಿ ಲಾಂಚ್ ಆದ ಹೋಂಡಾ ಕಂಪನಿಯ ಮೂರನೇ 125 ಸಿಸಿ ಸ್ಕೂಟರ್ ಇದಾಗಿದೆ. ಹೋಂಡಾ ಡಿಯೋ 125 ಬೆಲೆ ಹಾಗೂ ಫೀಚರ್ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.
ಹೊಂಡಾ ಡಿಯೋ 125 ಸ್ಟಾಂಡರ್ಡ್ ಎಕ್ಸ್ ಶೋರೂಂ ಮೌಲ್ಯ 83,400 ರೂಪಾಯಿಗಳಾಗಿದ್ದು ಸ್ಮಾರ್ಟ್ ಸ್ಕೂಟರ್ ಬೆಲೆ 91,300 ರೂಪಾಯಿ ಆಗಿದೆ. ಈಗಾಗಲೇ ಡಿಯೋ 125 ಎರಡೂ ರೂಪಾಂತರಗಳಿಗೆ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದೆ. ಶೀಘ್ರದಲ್ಲಿಯೇ ಭಾರತದಲ್ಲಿ ಇದರ ವಿತರಣೆ ಕೂಡ ಆರಂಭಗೊಳ್ಳಲಿದೆ.
ಹೊಸ ಹೋಂಡಾ ಡಿಯೊ 125 123.97cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ ಹೊಂದಿದೆ, ಇದು 8.19 bhp ಮತ್ತು 10.4 Nm ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ, ಇದನ್ನು CVT ಯೊಂದಿಗೆ ಜೋಡಿಸಲಾಗಿದೆ.
ಇದಲ್ಲದೆ, ಇದು ಸ್ಪೋರ್ಟಿ ಎಕ್ಸಾಸ್ಟ್ ನೋಟ್‌ಗಾಗಿ ಡ್ಯುಯಲ್ ಔಟ್‌ಲೆಟ್ ಮಫ್ಲರ್ ಅನ್ನು ಪಡೆಯುತ್ತದೆ. ಇನ್ನುಳಿದಂತೆ ಡಿಯೊ 125 ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೋಂಡಾದ H-ಸ್ಮಾರ್ಟ್ ಕೀ, ಮಿಶ್ರಲೋಹದ ಚಕ್ರಗಳೊಂದಿಗೆ ಮುಂಭಾಗದ ಡಿಸ್ಕ್ ಬ್ರೇಕ್, 18-ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಜಾಗವನ್ನು ಈ ಸ್ಕೂಟರ್ ಹೊಂದಿದೆ.