ಅಗ್ರ ದ್ವಿಚಕ್ರ ವಾಹನ ತಯಾರಕ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಎಲ್ಲಾ ಹೊಸ NX500 ಅಡ್ವೆಂಚರ್ ಟೂರರ್ ಅನ್ನು ಬಿಡುಗಡೆ ಮಾಡಿದೆ. ನೂತನ ಬೈಕ್ ನ ಆರಂಭಿಕ ಬೆಲೆ ರೂ. 5.9 ಲಕ್ಷ (ಎಕ್ಸ್ ಶೋ ರೂಂ ನವದೆಹಲಿ).
ಕಂಪ್ಲೀಟ್ಲಿ ಬಿಲ್ಟ್-ಅಪ್ ರೂಟ್ (CBU) ಮೂಲಕ ಹೊಸ ಹೋಂಡಾ ಎನ್ ಎಕ್ಸ್ 500 ಮಾದರಿಯು ಮಾರುಕಟ್ಟೆಯಲ್ಲಿ ತನ್ನ ಅಧಿಕೃತ ಪ್ರವೇಶ ಮಾಡಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯು ಹಂಚಿಕೊಂಡ ವಿವರಗಳ ಪ್ರಕಾರ ಹೊಸದಾಗಿ ಬಿಡುಗಡೆಯಾದ NX500 ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಯಾವುದೇ ಭೂಪ್ರದೇಶದಲ್ಲಿ ಉತ್ತಮ ಸವಾರಿಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಈಗಾಗಲೇ ಇದಕ್ಕಾಗಿ ಬುಕಿಂಗ್ ಆರಂಭಿಸಿದ್ದು, ದೇಶದಾದ್ಯಂತ ಬಿಗ್‌ವಿಂಗ್ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುವುದು.
ನೂತನ NX500 ಬೈಕ್ ವಿಶ್ವಾಸಾರ್ಹ 471cc, ಲಿಕ್ವಿಡ್ ಕೂಲ್ಡ್, 4-ಸ್ಟ್ರೋಕ್ DOHC ಎಂಜಿನ್ ಹೊಂದಿದೆ. ಇದು 8,600rpm ನಲ್ಲಿ 46bhp ಮತ್ತು 6,500rpm ನಲ್ಲಿ 43Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಎಲ್ಲಾ-ಹೊಸ NX500 ಟಾಪ್ ಟ್ರೆಂಡಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ 5-ಇಂಚಿನ TFT ಪರದೆಯಲ್ಲಿ ಬೈಕ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿಯನ್ನು ಸವಾರರಿಗೆ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ. ಮುಂಭಾಗದಲ್ಲಿ 19-ಇಂಚಿನ ಅಲ್ಯೂಮಿನಿಯಂ ವೈ-ಆಕಾರದ 5-ಸ್ಪೋಕ್ ಟೈರ್ ಮತ್ತು ಹಿಂಭಾಗದಲ್ಲಿ 17-ಇಂಚಿನ ಟೈರ್ ಅನ್ನು ಒಳಗೊಂಡಿದೆ. ಇದು ಹೆಚ್ಚು ಆರಾಮದಾಯಕವಾದ ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.