ಹಿಜ್ಬುಲ್ ಭಯೋತ್ಪಾದಕನ ಸಹೋದರ ರಯೀಸ್ ಮಟ್ಟೂ ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಮುನ್ನ ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನಲ್ಲಿರುವ ತನ್ನ ನಿವಾಸದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ತ್ರಿವರ್ಣ ಧ್ವಜ ಹಾರಿಸಿದ ಹಿಜ್ಬುಲ್ ಭಯೋತ್ಪಾದಕ ಜಾವಿದ್ ಮಟ್ಟೂ ಸಹೋದರ ರಯೀಸ್ ಮಟ್ಟೂ ತಾನು ಯಾರ ಒತ್ತಡಕ್ಕೂ ಮಣಿಯದೆ ತ್ರಿವರ್ಣ ಧ್ವಜವನ್ನು ಹಾರಿಸಿರುವುದಾಗಿ ಹೇಳಿದ್ದಾನೆ. ಸಾರೆ ಜಹಾನ್ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ ಎಂದು ದೇಶಭಕ್ತಿ ಗೀತೆ ಹಾಡಿದ್ದಾರೆ.
ರಯೀಸ್ ತಮ್ಮ ಮನೆಯ ಕಿಟಕಿಯಿಂದ ತ್ರಿವರ್ಣ ಧ್ವಜವನ್ನು ಬೀಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಭಾರತವು ಮಂಗಳವಾರದಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದೆ. ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ, ಗಣಪತ್ ಸೇತುವೆ ಭಾನುವಾರ ಸಂಜೆ ತ್ರಿವರ್ಣದ ಬಣ್ಣಗಳಲ್ಲಿ ಬೆಳಗಿತು.
https://twitter.com/ANI/status/1690980065675468800?ref_src=twsrc%5Etfw%7Ctwcamp%5Etweetembed%7Ctwterm%5E1690980065675468800%7Ctwgr%5E39d393b8980af17037ab91e0acd064d38e5544f5%7Ctwcon%5Es1_&ref_url=https%3A%2F%2Fwww.hindustantimes.com%2Findia-news%2Fhizbul-terrorist-s-brother-who-hoisted-tricolour-in-kashmir-says-saare-jahaan-se-achha-101691997485684.html