ತಮಿಳುನಾಡಿಗೆ ಬರುವ ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದಿ ಭಾಷಿಕರು ಕಟ್ಟಡ ನಿರ್ಮಾಣ ಕೆಲಸ ಅಥವಾ ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ಮಾಡುತ್ತಾರೆಂಬ ಡಿಎಂಕೆ ಸಂಸದ ದಯಾನಿಧಿ ಮಾರನ್ ಮಾತು ವಿವಾದ ಹುಟ್ಟಿಹಾಕಿದೆ. ಅವರ ಭಾಷಣದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ಹಂಚಿಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, “ಮತ್ತೊಮ್ಮೆ ಡಿವೈಡ್ ಮತ್ತು ರೂಲ್ ಕಾರ್ಡ್ ಪ್ಲೇ ಮಾಡುವ ಪ್ರಯತ್ನ” ಎಂದು ಆರೋಪಿಸಿದ್ದಾರೆ.
“ಮೊದಲು ರಾಹುಲ್ ಗಾಂಧಿ ಉತ್ತರ ಭಾರತದ ಮತದಾರರನ್ನು ಅವಮಾನಿಸಿದರು. ನಂತರ ರೇವಂತ್ ರೆಡ್ಡಿ ಬಿಹಾರದ ಡಿಎನ್ಎ ನಿಂದನೆ ಮಾಡಿದರು. ಬಳಿಕ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಅವರು “ಗೋಮೂತ್ರ ರಾಜ್ಯಗಳು” ಎಂದು ಹೇಳಿದರು. ಈಗ ದಯಾನಿಧಿ ಮಾರನ್ ಹಿಂದಿ ಭಾಷಿಕರನ್ನು ಮತ್ತು ಉತ್ತರವನ್ನು ಅವಮಾನಿಸಿದ್ದಾರೆ. ಹಿಂದೂಗಳು/ಸನಾತರನ್ನು ನಿಂದಿಸುವುದು, ನಂತರ ಡಿವೈಡ್ ಅಂಡ್ ರೂಲ್ ಕಾರ್ಡ್ ಪ್ಲೇ ಮಾಡುವುದು INDIA ದ ಡಿ ಎನ್ ಎ. ನಿತೀಶ್ ಕುಮಾರ್, ತೇಜಸ್ವಿ ಯಾದವ್, ಲಾಲು ಯಾದವ್, ಕಾಂಗ್ರೆಸ್, ಎಸ್ಪಿ ಅಖಿಲೇಶ್ ಯಾದವ್ ಎಲ್ಲರೂ ಇದು ಆಗುತ್ತಿಲ್ಲ ಎಂದು ನಟಿಸುತ್ತಾರೆಯೇ ? ಅವರು ಯಾವಾಗ ನಿಲುವು ತೆಗೆದುಕೊಳ್ಳುತ್ತಾರೆ ?”ಎಂದು ಬಿಜೆಪಿ ನಾಯಕ ಟ್ವಿಟರ್ ನಲ್ಲಿ ಪ್ರಶ್ನಿಸಿ ಪೋಸ್ಟ್ ಮಾಡಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್‌ಕುಮಾರ್ ಎಸ್ ಅವರ ವಿವಾದಿತ ಹೇಳಿಕೆ ನಂತರ ದಯಾನಿಧಿ ಮಾರನ್ ಹೇಳಿಕೆ ಮತ್ತಷ್ಟು ಕಿಡಿ ಹಚ್ಚಿದೆ.
ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್‌ಕುಮಾರ್ ಎಸ್, ಇತ್ತೀಚಿಗೆ ನಡೆದ 5 ರಾಜ್ಯ ವಿಧಾನಸಭಾ ಚುನಾವಣೆ ಪೈಕಿ 3ರಲ್ಲಿ ಗೆಲುವು ಸಾಧಿಸಿದ ಭಾರತೀಯ ಜನತಾ ಪಕ್ಷದ ಗೆಲುವನ್ನು ಲೇವಡಿ ಮಾಡುತ್ತಾ, ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವುದರಲ್ಲಿ ಬಿಜೆಪಿಯ ಶಕ್ತಿ ಇದೆ, ನೀವು ದಕ್ಷಿಣ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಇದು ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾಗಿ ಅವರ ಹೇಳಿಕೆಯನ್ನ ಕಡತದಿಂದ ತೆಗೆದುಹಾಕಲಾಯಿತು.
ಮತ್ತೊಂದು ನಿದರ್ಶನದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧಿಕಾರ ವಹಿಸಿಕೊಂಡ ನಂತರ ಅವರ ಹಳೆಯ ವೀಡಿಯೊ ಮತ್ತೆ ಕಾಣಿಸಿಕೊಂಡಿತು. ಅದರಲ್ಲಿ ಅವರು ತಮ್ಮ ಎದುರಾಳಿ ಮತ್ತು ಮಾಜಿ ಸಿಎಂ ಕೆ ಚಂದ್ರಶೇಖರ ರಾವ್ ಅವರ “ಡಿಎನ್ಎ ಬಿಹಾರದಿಂದ ಬಂದಿದೆ” ಎಂದು ಹೇಳಿದ್ದರು.
https://twitter.com/Shehzad_Ind/status/1738511484882403333?ref_src=twsrc%5Etfw%7Ctwcamp%5Etweetembed%7Ctwterm%5E1738511484882403333%7Ctwgr%5E8d1fc3030715e2c5389cbd1bba9e82fcdaf8f719%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fbusinesstoday-epaper-dh38ef7c726c6b46d0b00137e23e5f11b6%2Fhindispeakersfromupbiharcleantoiletsintamilnadudmksdayanidhimaransparksrow-newsid-n568129882