ಹಿಮಾಲಯದಲ್ಲಿ ಇರುವ ಕೀಡಾ ಜಡಿ ಎಂಬ ಹೆಸರಿನ ಗಿಡಮೂಲಿಕೆಯೊಂದು ಸದ್ಯ ಭಾರೀ ಸದ್ದು ಮಾಡ್ತಿದೆ. ಇದು ತನ್ನ ಅಸಾಧಾರಣ ಮೌಲ್ಯದಿಂದಾಗಿ ಜಾಗತಿಕವಾಗಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕ್ಯಾಟರ್ಪಿಲ್ಲರ್ ಫಂಗಸ್ ಎಂದೂ ಕರೆಯಲ್ಪಡುವ ಈ ಗಿಡಮೂಲಿಕೆಯು ಸಾಕಷ್ಟು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.
ನೀರಿನಲ್ಲಿ ಕುದಿಸಿದ ಬಳಿಕ ಇದನ್ನು ಸಾಮಾನ್ಯವಾಗಿ ಚಹಾ ಅಥವಾ ಸೂಪ್ನ ರೀತಿಯಲ್ಲಿ ಸೇವಿಸಬಹುದಾಗಿದೆ. ಪಿತ್ತಜನಕಾಂಗದ ಕಾಯಿಲೆ, ನಿತ್ರಾಣ, ಕ್ಯಾನ್ಸರ್ ಸೇರಿದಂತೆ ಸಾಕಷ್ಟು ಕಾಯಿಲೆಗಳಿಗೆ ಇದರಿಂದ ಪ್ರಬಲ ಪರಿಹಾರ ಸಿಗುತ್ತೆ ಎನ್ನಲಾಗಿದೆ. ಇದು ಕಾಯಿಲೆಗಳನ್ನು ಗುಣಪಡಿಸೋದ್ರ ಜೊತೆಯಲ್ಲಿ ರೋಗಿಗೆ ಹೆಚ್ಚುವರಿ ಚೈತನ್ಯವನ್ನೂ ನೀಡುತ್ತೆ ಎಂದು ಹೇಳಲಾಗಿದೆ.
ಇದು ಸಾಮಾನ್ಯವಾಗಿ ಪರ್ವತ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಭೂತಾನ್, ಭಾರತ, ಚೀನಾ ಹಾಗೂ ನೇಪಾಳದಲ್ಲಿ ಕಾಣಸಿಗುತ್ತೆ. 3300 ಮೀಟರ್ಗಳಿಂದ 4500 ಮೀಟರ್ ಎತ್ತರವಿರುವ ಜಾಗಗಳಲ್ಲಿ ಇದು ಹೆಚ್ಚಾಗಿ ಕಾಣುತ್ತದೆ. ಇನ್ನೊಂದು ವಿಚಿತ್ರ ಅಂದರೆ ಇದು ಲಾರ್ವಾಗಳ ತಲೆಯ ಮೇಲೆ ಬೆಳೆಯುವ ಗಿಡಮೂಲಿಕೆಯಾಗಿದೆ.
ಈ ಗಿಡಗಳು ಸಾಮಾನ್ಯವಾಗಿ 21 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ತಾಪಮಾನದಲ್ಲಿ ಬೆಳೆಯುತ್ತದೆ. ಈ ಗಿಡಮೂಲಿಕೆಗೆ ಎಷ್ಟು ಬೇಡಿಕೆಯಿದೆ ಎಂದರೆ ಕೇವಲ 1 ಕೆಜಿ ಕೀಡಾ ಜಡಿ ಗಿಡ ಮೂಲಿಕೆಯು ಬರೋಬ್ಬರಿ 70 ಲಕ್ಷ ರೂಪಾಯಿಗೆ ಮಾರಾಟವಾಗ್ತಿದೆ ಎಂದರೆ ನೀವು ನಂಬ್ಲೇಬೇಕು.