ಬೆಂಗಳೂರು: ಪತಿಯ ವಿಚ್ಛೇದನ ನೋಟಿಸ್ ಬಳಿಕವೂ 498ಎ ಕೇಸ್ ದಾಖಲಿಸಬಹುದು ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.
ಪತಿಯ ವಿಚ್ಛೇದನ ನೋಟಿಸ್ ನಂತರವೂ 498 ಎ ಕೇಸ್ ದಾಖಲಿಸಬಹುದು. ಪತಿ ಮತ್ತು ಆತನ ಕುಟುಂಬದವರ ಕಿರುಕುಳದಿಂದ ರಕ್ಷಿಸಲು 498ಎ ಕಾನೂನು ತರಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
498ಎ ಕಾನೂನು ಕೌಟುಂಬಿಕ ಕಿರುಕುಳದಿಂದ ಮಹಿಳೆಗೆ ರಕ್ಷಣೆ ಒದಗಿಸುತ್ತದೆ. 498ಎ ಪ್ರಕರಣದಿಂದ ಪತಿಗೆ ರಕ್ಷಣೆ ಒದಗಿಸುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ನೀಡಲಾಗಿದೆ.
ಇತ್ತೀಚೆಗಷ್ಟೇ ಹೈಕೋರ್ಟ್ ಕಲಬುರ್ಗಿ ಪೀಠ, ಪತಿಯಿಂದ ವಿವಾಹ ವಿಚ್ಛೇದನದ ನೋಟಿಸ್ ಬಂದ ನಂತರ ಪತ್ನಿ, ತನ್ನ ಪತಿ ಹಾಗೂ ಅವರ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ ಆ ದೂರು ತನ್ನ ಮಹತ್ವ ಕಳೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟು, ಈ ಕುರಿತು ದಾಖಲಾಗಿದ್ದ ಕ್ರಿಮಿನಲ್ ಅರ್ಜಿಯನ್ನು ವಜಾಗೊಳಿಸಿ ಎಫ್ಐಆರ್ ರದ್ದುಗೊಳಿಸಿತ್ತು.