ಕಚೋರಿ ಎಲ್ಲರಿಗೂ ಇಷ್ಟವಾಗುತ್ತೆ. ಕೆಲವರು ಮಸಾಲೆ ಕಚೋರಿ ತಿಂದ್ರೆ ಮತ್ತೆ ಕೆಲವರು ತರಕಾರಿ ಕಚೋರಿ ತಿನ್ನಲು ಇಷ್ಟಪಡ್ತಾರೆ.
ಪಾಲಕ್ ಸೊಪ್ಪಿನಿಂದ ಕೂಡ ಕಚೋರಿ ಮಾಡಬಹುದು. ತಿನ್ನಲೂ ರುಚಿ, ಆರೋಗ್ಯಕ್ಕೂ ಒಳ್ಳೆಯದಾದ ಈ ಕಚೋರಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ.
ಪಾಲಕ್ ಕಚೋರಿ ಮಾಡಲು ಬೇಕಾಗುವ ಪದಾರ್ಥಗಳು:
ಮುಕ್ಕಾಲು ಕಪ್ ಮೈದಾ
ಮೂರು ಚಮಚ ಪಾಲಕ್ ರಸ
ಅರ್ಧ ಚಮಚ ಅಜವಾನ
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಬೇಕಾಗುವಷ್ಟು ಎಣ್ಣೆ
ಪಾಲಕ್ ಕಚೋರಿ ಮಾಡುವ ವಿಧಾನ:
ಮೊದಲು ಒಂದು ಪಾತ್ರೆಗೆ ಮೈದಾ ಹಿಟ್ಟು, ಉಪ್ಪು, ಪಾಲಕ್ ರಸ, ಅಜವಾನ ಹಾಗೂ ಸ್ವಲ್ಪ ಎಣ್ಣೆಯನ್ನು ಹಾಕಿ. ಈ ಮಿಶ್ರಣವನ್ನು ಚಪಾತಿ ಹದಕ್ಕೆ ಕಲಿಸಿಕೊಳ್ಳಿ. ನಂತ್ರ ಸಣ್ಣ ಉಂಡೆಗಳನ್ನಾಗಿ ಮಾಡಿ ಅದನ್ನು ಪೂರಿ ಆಕಾರದಲ್ಲಿ ಸಿದ್ಧಮಾಡಿಕೊಳ್ಳಿ. ನಂತ್ರ ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತ್ರ ಪೂರಿಯಾಕಾರದ ಪಾಲಕ್ ಕಚೋರಿಯನ್ನು ಪ್ರೈ ಮಾಡಿ. ಬಿಸಿ ಬಿಸಿಯಾಗಿರುವಾಗ ಚಟ್ನಿ ಅಥವಾ ಆಲೂಗಡ್ಡೆ ಸಬ್ಜಿ ಜೊತೆ ಪಾಲಕ್ ಕಚೋರಿಯನ್ನು ಸವಿಯಿರಿ.