ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರದೇ ಇರುವುದು ಅಪರೂಪ. ಇದರ ಬಗ್ಗೆ ಈಗಾಗಲೇ ಹತ್ತು ಹಲವು ಜೋಕುಗಳು ಬಂದು ಹೋಗಿವೆ. ಯೂಟ್ಯೂಬ್ ನಲ್ಲಿ ತಡಕಾಡಿದರೆ ಕಣ್ಣೀರು ಬರದಂತೆ ಮಾಡಲು ಹಲವಾರು ಟಿಪ್ಸ್ ಗಳು ಸಿಗುತ್ತದೆ.
ನಿಮಗೆ ಹೆಚ್ಚು ನೀರುಳ್ಳಿ ಕತ್ತರಿಸುವ ಸಂದರ್ಭ ವಿದ್ದರೆ ಅದರ ತಲೆ ಹಾಗೂ ಬುಡವನ್ನು ಕತ್ತರಿಸಿ ಪಕ್ಕಕ್ಕಿಡಿ. ಹತ್ತು ನಿಮಿಷ ಹಾಗೇ ಬಿಡಿ ಇಲ್ಲವೇ ಫ್ರಿಜ್ ನಲ್ಲಿಡಿ. ಬಳಿಕ ಕತ್ತರಿಸುವಾಗ ಕಣ್ಣು ಉರಿಯುವುದಿಲ್ಲ.
ಈರುಳ್ಳಿಯನ್ನು ಅರ್ಧ ಭಾಗಕ್ಕೆ ಕತ್ತರಿಸಿ ನೀರಿನಲ್ಲಿ ಹಾಕಿ. ಐದು ನಿಮಿಷ ಬಳಿಕ ಕತ್ತರಿಸಿದರೂ ಕಣ್ಣು ಉರಿಯುವುದಿಲ್ಲ. ಈರುಳ್ಳಿ ಕತ್ತರಿಸುವ ವೇಳೆ ಅದರ ಸಿಪ್ಪೆಯನ್ನು ತಲೆಯಮೇಲೆ ಇಟ್ಟುಕೊಂಡರೆ ಕಣ್ಣೀರು ಬರುವುದಿಲ್ಲ ಎಂದು ಮನೆಯ ಹಿರಿಯರು ಹೇಳುವುದುಂಟು. ಇದಕ್ಕೆ ವೈಜ್ಞಾನಿಕವಾಗಿ ಯಾವುದೇ ಪುರಾವೆಗಳಿಲ್ಲ.
ಮನೆಯಲ್ಲೇ ಒಂದೆರಡು ಈರುಳ್ಳಿಗಳನ್ನು ಕತ್ತರಿಸುವುದಾದರೆ ಅಷ್ಟೇನೂ ತೊಂದರೆಯಾಗಲ್ಲ. ರೆಸ್ಟೋರೆಂಟ್ ನಲ್ಲಿ ಹೆಚ್ಚಿನ ಈರುಳ್ಳಿ ಕತ್ತರಿಸುವಾಗ ಅಥವಾ ಮನೆಗೆ ನೆಂಟರು ಬಂದಿದ್ದಾಗ ಹೆಚ್ಚು ಈರುಳ್ಳಿ ಕತ್ತರಿಸಬೇಕಾದಾಗ ಈ ಟಿಪ್ಸ್ ಗಳನ್ನು ನೀವು ಅನುಸರಿಸಬಹುದು.