ಬೈಕ್‌ಗೆ ಆಗಾಗ ಸರ್ವೀಸ್ ಮಾಡಿಸುವುದು ಬಹಳ ಮುಖ್ಯ. ಇದರಿಂದ ಎಂಜಿನ್ ಮತ್ತು ಇತರ ಯಾಂತ್ರಿಕ ಭಾಗಗಳು ಸರಾಗವಾಗಿ ಚಲಿಸುತ್ತವೆ. ಇದು ಬೈಕಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಮೈಲೇಜ್ ಅನ್ನು ಹೆಚ್ಚಿಸುತ್ತದೆ. ಇಂಜಿನ್ ಆಯಿಲ್ ಮತ್ತು ಏರ್ ಫಿಲ್ಟರ್ ಅನ್ನು ಆಗಾಗ ಬದಲಾಯಿಸುವುದರಿಂದ ಎಂಜಿನ್ ಕಾರ್ಯಕ್ಷಮತೆ ಹೆಚ್ಚುತ್ತದೆ. ಬೈಕ್‌ನಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕೂಡ ಬರುವುದಿಲ್ಲ. ಇದರಿಂದಾಗಿ ದುಬಾರಿ ರಿಪೇರಿ ವೆಚ್ಚವನ್ನು ತಡೆಯಬಹುದು.
ಬೈಕ್ ಸರ್ವೀಸ್ ಅನ್ನು ಯಾವಾಗ ಮಾಡಿಸಬೇಕು ಎಂಬುದು ಬಳಕೆಯ ಮೇಲೆ ಆಧಾರಿತವಾಗಿದೆ. ಬೈಕ್ ಅನ್ನು ಹೆಚ್ಹೆಚ್ಚು ಬಳಸುತ್ತಿದ್ದರೆ ಸರ್ವೀಸಿಂಗ್‌ನ ಅಗತ್ಯ ಕೂಡ ಹೆಚ್ಚಾಗಿರುತ್ತದೆ.
ಹೊಸ ಬೈಕ್ ಅನ್ನು ಮೊದಲ 500 ಕಿಲೋಮೀಟರ್ ನಂತರ ಸರ್ವೀಸ್ ಮಾಡಿಸಬೇಕು. 1000 ಕಿಲೋಮೀಟರ್ ಓಡಿದ ಬಳಿಕ ಮತ್ತೊಮ್ಮೆ ಸರ್ವೀಸಿಂಗ್ ಅಗತ್ಯವಿರುತ್ತದೆ. ಅದರ ನಂತರ ಪ್ರತಿ 3000 ಕಿಲೋಮೀಟರ್‌ಗಳಿಗೆ ಒಮ್ಮೆ ಸರ್ವೀಸ್ ಮಾಡಿಸಬೇಕು.
ಹಳೆಯ ಬೈಕ್‌ಗೆ ಪ್ರತಿ 2000-2500 ಕಿಲೋಮೀಟರ್‌ಗಳಿಗೆ ಒಮ್ಮೆ ಸರ್ವೀಸಿಂಗ್ ಅಗತ್ಯವಿರುತ್ತದೆ. ಪ್ರತಿದಿನ ಬೈಕ್ ಸವಾರಿ ಮಾಡುತ್ತಿದ್ದರೆ, ಪ್ರತಿ 1500-2000 ಕಿಲೋಮೀಟರ್‌ಗಳಿಗೆ ಸರ್ವಿಸ್ ಮಾಡಿಸುವುದು ಉತ್ತಮ. ಬೈಕ್ ಅನ್ನು ಹೆಚ್ಚು ಓಡಿಸದೇ ಇದ್ದಲ್ಲಿ 3-4 ತಿಂಗಳಿಗೊಮ್ಮೆ ಸರ್ವಿಸ್ ಮಾಡಬೇಕು.
ಮಳೆ ಅಥವಾ ಧೂಳಿನ ವಾತಾವರಣದಲ್ಲಿ ಬೈಕ್ ಅನ್ನು ತ್ವರಿತವಾಗಿ ಸರ್ವೀಸ್ ಮಾಡಬೇಕು. ಬೈಕ್‌ನಲ್ಲಿ ಬಹಳ ದೂರದ ಪ್ರಯಾಣ ಮಾಡುತ್ತಿದ್ದರೆ, ಪ್ರಯಾಣಿಸುವ ಮೊದಲು ಒಮ್ಮೆ ಸರ್ವೀಸ್ ಮಾಡಿಸಿ.
ಬೈಕ್‌ನಲ್ಲಿ ದೋಷ ಕಂಡುಬಂದರೆ ಕೂಡಲೇ ಸರ್ವಿಸ್ ಮಾಡಬೇಕು. ಇದಕ್ಕಾಗಿ ಅಧಿಕೃತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಬೈಕ್‌ನ ಬಿಡಿ ಭಾಗಗಳು ಮತ್ತು ನುರಿತ ಮೆಕ್ಯಾನಿಕ್‌ಗಳು ಲಭ್ಯವಿರುವಲ್ಲಿ ಸರ್ವೀಸ್ ಮಾಡಿಸುವುದು ಉತ್ತಮ. ಸರ್ವೀಸ್ ಬಳಿಕ ಬೈಕಿನ ಇಂಜಿನ್ ದೀರ್ಘಕಾಲ ಚೆನ್ನಾಗಿ ಚಲಿಸುತ್ತದೆ. ಬೈಕಿನ ಮೈಲೇಜ್ ಹೆಚ್ಚುತ್ತದೆ, ಕಾರ್ಯಕ್ಷಮತೆ ಸುಧಾರಿಸುತ್ತದೆ. ಬೈಕ್ ಕೆಟ್ಟು ಹೋಗುವ ಸಾಧ್ಯತೆ ಕಡಿಮೆ.