ನಿಮ್ಮ ಲವ್ ಲೈಫನ್ನು ಇನ್ನಷ್ಟು ರೋಮಾಂಚನಗೊಳಿಸಲು ಇಷ್ಟಪಡುವವರಿಗೆ ವಾಸ್ತು ಶಾಸ್ತ್ರ ಫೆಂಗ್ ಶೂಯಿ ಕೆಲವೊಂದು ಸಲಹೆ ನೀಡುತ್ತದೆ. ಫೆಂಗ್ ಶೂಯಿ ಪ್ರಕಾರ ನಮ್ಮ ಸುತ್ತಮುತ್ತ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿಗಳು ಸುತ್ತುತ್ತಿರುತ್ತವೆ. ಅವು ಪ್ರೀತಿಯ ಮೇಲೆ ಪರಿಣಾಮ ಬೀರುತ್ತವೆ. ನಕಾರಾತ್ಮಕ ಶಕ್ತಿಯನ್ನು ಹತ್ತಿಕ್ಕಿ ಸಕಾರಾತ್ಮಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದರ ಬಗ್ಗೆ ಫೆಂಗ್ ಶೂಯಿ ಹೀಗೆ ಹೇಳುತ್ತದೆ.
ಫೆಂಗ್ ಶೂಯಿ ಪ್ರಕಾರ ದಂಪತಿ ಕೋಣೆಯಲ್ಲಿ ಟಿವಿ ಇರಬಾರದು. ಆಧುನಿಕ ಜಗತ್ತಿನಲ್ಲಿ ಟಿವಿ ಸೇರಿದಂತೆ ಕೆಲ ಎಲೆಕ್ಟ್ರಾನಿಕ್ ವಸ್ತುಗಳು ಮನುಷ್ಯನ ನಡುವೆ ಸಂವಹನವನ್ನು ಕಡಿಮೆ ಮಾಡುತ್ತಿವೆ. ಇದರಿಂದಾಗಿ ಪರಸ್ಪರ ಮಾತುಕತೆ, ಪ್ರೀತಿ ಕಡಿಮೆಯಾಗುತ್ತಿದೆ.
ದಂಪತಿ ಒಂದೇ ಬೆಡ್ ಮೇಲೆ ಮಲಗಬೇಕು. ದೊಡ್ಡ ಹಾಸಿಗೆ ಮೇಲೆ ಒಟ್ಟಿಗೆ ಮಲಗಬೇಕು. ಎರಡು ಹಾಸಿಗೆ ಸೇರಿಸಿ ಮಲಗಬಾರದು. ಹಾಗೆ ಮಾಡಿದಲ್ಲಿ ವೈವಾಹಿಕ ಜೀವನದ ಸಾರ ಕಡಿಮೆಯಾಗುತ್ತದೆ.
ನದಿ, ಸಮುದ್ರ, ಜಲಪಾತಗಳ ಚಿತ್ರವನ್ನು ಬೆಡ್ ರೂಂನಲ್ಲಿ ಹಾಕಬೇಡಿ. ಅಕ್ವೇರಿಯ ಅಥವಾ ಮೀನಿನ ಚಿತ್ರವನ್ನೂ ಹಾಕಬೇಡಿ. ರಾತ್ರಿ ಬಾಯಾರಿಕೆಯಾಗುತ್ತದೆ ಎಂದಾದಲ್ಲಿ ಮಾತ್ರ ಒಂದು ಬಾಟಲ್ ನೀರನ್ನು ಇಟ್ಟುಕೊಳ್ಳಿ.
ಏಕ ಪಕ್ಷಿ, ಆಕ್ರಮಣಕಾರಿ ಪ್ರಾಣಿ ಚಿತ್ರ ಅಥವಾ ಮೂರ್ತಿ ಒಂಟಿತನದ ಸಂಕೇತ. ಹಾಗಾಗಿ ಜೋಡಿ ಹಕ್ಕಿ ಅಥವಾ ಮೂರ್ತಿಯನ್ನು ಮನೆಯಲ್ಲಿಡಿ.
ಕಿಟಕಿಯ ಬಳಿ ಹಾಸಿಗೆಯನ್ನು ಹಾಕಬೇಡಿ. ಇದರಿಂದ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಅವಶ್ಯವಿದ್ದಲ್ಲಿ ಕಿಟಕಿಗೆ ಪರದೆ ಹಾಕಿ. ಇದರಿಂದ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ.
ಮನೆಯ ಅಲಂಕಾರ ಧನಾತ್ಮಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಮನೆಯ ಸ್ವಚ್ಛತೆ ಹಾಗೂ ಅಲಂಕಾರಕ್ಕೆ ಹೆಚ್ಚಿನ ಗಮನ ನೀಡಿ.