alex Certify ಸುಟ್ಟ ಗಾಯಕ್ಕೆ ಇಲ್ಲಿದೆ ನೋಡಿ ಸೂಪರ್ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಟ್ಟ ಗಾಯಕ್ಕೆ ಇಲ್ಲಿದೆ ನೋಡಿ ಸೂಪರ್ ಮನೆ ಮದ್ದು

ಮನೆಯಲ್ಲಿ ಅಡುಗೆ ಮಾಡುವಾಗ ಅಥವಾ ಇನ್ಯಾವುದೋ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಾಗಿ ಗಾಯವಾಗುತ್ತದೆ. ಸುಟ್ಟಗಾಯಕ್ಕೆ ಈ ಮದ್ದುಗಳನ್ನು ಹಾಕಿ ಅದರ ಉರಿ ಕಡಿಮೆ ಮಾಡಿಕೊಳ್ಳಬಹುದು.

*ಸಣ್ಣಪುಟ್ಟ ಸುಟ್ಟ ಗಾಯವಾದರೆ ತಕ್ಷಣವೇ ಕೈಗೆ ತಣ್ಣಿರನ್ನು ಹಾಕಿ. ಯಾವುದೇ ಕಾರಣಕ್ಕೂ ಐಸ್ ನೀರು ಬೇಡ. 20 ನಿಮಿಷ ಬೆಂಕಿ ತಗುಲಿದ ಜಾಗವನ್ನು ತಣ್ಣೀರಿನಿಂದ ತೊಳೆಯುತ್ತಿರಿ.

* ಒಂದು ಬಟ್ಟೆಯನ್ನು ತಣ್ಣೀರಿನಿಂದ ಒದ್ದೆ ಮಾಡಿಕೊಂಡು ಸುಟ್ಟ ಗಾಯದ ಮೇಲೆ ನಿಧಾನಕ್ಕೆ ಇಡಿ. ಇದು ಕೂಡ ಗಾಯದ ಉರಿಯನ್ನು ಕಡಿಮೆ ಮಾಡುತ್ತದೆ.

* ಮನೆಯಲ್ಲಿ ಅಲೋವೆರಾ ಗಿಡವಿದ್ದರೆ ಅದರ ಲೋಳೆಯನ್ನು ಸುಟ್ಟ ಗಾಯದ ಮೇಲೆ ಹಚ್ಚುವುದರಿಂದ ಉರಿಯನ್ನು ಶಮನ ಮಾಡಿಕೊಳ್ಳಬಹುದು.

*ಜೇನುತುಪ್ಪವು ನೈಗಿರ್ಕವಾದ ಆಂಟಿಬ್ಯಾಕ್ಟಿರಿಯಲ್, ಹಾಗೂ ಆ್ಯಂಟಿಫಂಗಲ್ ಗುಣವನ್ನು ಹೊಂದಿದೆ, ಸುಟ್ಟಗಾಯದ ಮೇಲೆ ಜೇನುತುಪ್ಪವನ್ನು ಹಚ್ಚುವುದರಿಂದ ಉರಿ ತಣ್ಣಗಾಗುತ್ತದೆ.

* ಸುಟ್ಟಗಾಯಕ್ಕೆ ಮೊಟ್ಟೆಯ ಬಿಳಿಭಾಗ, ತೆಂಗಿನೆಣ್ಣೆ, ಬೆಣ್ಣೆಯನ್ನು ಹಚ್ಚಬೇಡಿ, ಇದರಿಂದ ಮತ್ತಷ್ಟು ನೋವು ಹೆಚ್ಚಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...