ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸ್ತಾರೆ. ಹಾರ್ಮೋನ್ ಏರುಪೇರಿನಿಂದಾಗಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಈ ಸ್ಟ್ರೆಚ್ ಮಾರ್ಕ್ಸನ್ನು ಸುಲಭವಾಗಿ ಮನೆ ಮದ್ದಿನ ಮೂಲಕ ಕಡಿಮೆ ಮಾಡಿಕೊಳ್ಳಬಹುದು.
ಅಪ್ರಿಕಾಟ್ : ಕ್ಯಾಲ್ಸಿಯಂ, ಸತು, ಕಬ್ಬಿಣ, ಮ್ಯಾಗ್ನೆಸಿಮ್, ಖನಿಜಗಳು ಸಾಕಷ್ಟಿವೆ. ಇದು ಪುರುಷರನ್ನು ಕಾಡುವ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡಲು ಬಹಳ ಉಪಯೋಗಕಾರಿ. 2-3 ಅಪ್ರಿಕಾಟ್ ತೆಗೆದುಕೊಂಡು ಪೇಸ್ಟ್ ಮಾಡಿ. ಅದನ್ನು ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ 15 ನಿಮಿಷ ಬಿಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಪ್ರತಿದಿನ ಹೀಗೆ ಮಾಡ್ತಾ ಬಂದ್ರೆ ಆದಷ್ಟು ಬೇಗ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗಲಿದೆ.
ತೆಂಗಿನ ಎಣ್ಣೆ : ತೆಂಗಿನ ಎಣ್ಣೆ ತ್ವಚೆಯ ಸೌಂದರ್ಯ ವೃದ್ಧಿಗೆ ಬಹಳ ಉಪಯೋಗಕಾರಿ. 2 ಟೀ ಸ್ಪೂನ್ ತೆಂಗಿನ ಎಣ್ಣೆ ಹಾಗೂ 1 ಟೀ ಸ್ಪೂನ್ ನಿಂಬೆ ಹಣ್ಣನ್ನು ಪೇಸ್ಟ್ ಮಾಡಿ. ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ 10 ನಿಮಿಷ ಬಿಡಿ.
ಅವಕೋಡಾ: ಅವಕೋಡಾದಲ್ಲಿ ಬಿ7 ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವ ಕೆಲಸ ಮಾಡುತ್ತದೆ. ಒಂದು ಅವಕೋಡಾ, 1 ಚಮಚ ನಿಂಬೆ ರಸ, ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ. 15 ನಿಮಿಷ ಹಚ್ಚಿ ನಂತ್ರ ತೊಳೆದುಕೊಳ್ಳಿ.
ವಿಟಮಿನ್ ಇ ಹಾಗೂ ಬಾದಾಮಿ ತೈಲ : ಪುರುಷರ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವ ಕೆಲಸವನ್ನು ವಿಟಮಿನ್ ಇ ಹಾಗೂ ಬಾದಾಮಿ ತೈಲ ಮಾಡುತ್ತದೆ. ಒಂದು ಚಮಚ ಬಾದಾಮಿ ಎಣ್ಣೆಗೆ ಅರ್ಧ ಚಮಚ ವಿಟಮಿನ್ ಇಯನ್ನು ಬೆರೆಸಿ ಸ್ಟ್ರೆಚ್ ಮಾರ್ಕ್ಸ್ಗೆ ಹಚ್ಚಿಕೊಳ್ಳಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿದ್ರೆ ಕೆಲವೇ ದಿನಗಳಲ್ಲಿ ಸ್ಟ್ರೆಚ್ ಮಾರ್ಕ್ಸ್ ಗೆ ಗುಡ್ ಬೈ ಹೇಳಬಹುದು.