ಕೂದಲನ್ನು ಉದ್ದವಾಗಿ ಬೆಳೆಸಲು ನೆಲ್ಲಿಕಾಯಿ ಪುಡಿಯನ್ನು ಬಳಸಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಹಾಗಿದ್ದರೆ ನೆಲ್ಲಿಕಾಯಿ ಪುಡಿಯನ್ನು ಹೇಗೆ ಬಳಸುವುದು?
ನೆಲ್ಲಿಕಾಯಿ ನೆತ್ತಿಯ ಕೂದಲನ್ನು ಹೆಚ್ಚಿಸಿ, ತಲೆಹೊಟ್ಟು ಸಮಸ್ಯೆಯನ್ನು ದೂರ ಮಾಡುತ್ತದೆ. ಇದಕ್ಕೆ ಅಂಟುವಾಳ ಮತ್ತು ಸೀಗೆ ಪುಡಿಯ ಮಿಶ್ರಣ ಬೆರೆಸಿ ಲೇಪ ತಯಾರಿಸಿ. ತಲೆಗೆ ಹಚ್ಚಿದ ಒಂದು ಗಂಟೆ ಬಳಿಕ ಸ್ನಾನ ಮಾಡಿ.
ಇದಕ್ಕೆ ಮೊಸರನ್ನು ಬೆರೆಸಿ ತಲೆಗೆ ಹಚ್ಚಿಕೊಂಡರೆ ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇವೆರಡನ್ನು ಸಮಪ್ರಮಾಣದಲ್ಲಿ ಬೆರೆಸಿ ನೆತ್ತಿಗೆ ಹಚ್ಚಿ ಬಳಿಕ ತಣ್ಣೀರಿನಿಂದ ತೊಳೆಯಿರಿ.
ನೆಲ್ಲಿಕಾಯಿ ಪುಡಿಗೆ ಮೆಂತೆ ಕಾಳಿನ ಪುಡಿಯನ್ನು ಬೆರೆಸಿಯೂ ತಲೆಗೆ ಹಚ್ಚಿಕೊಳ್ಳಬಹುದು. ಮೆಂತೆ ಕಾಳನ್ನು ನೀರಿನಲ್ಲಿ ಹಿಂದಿನ ರಾತ್ರಿಯೇ ನೆನೆಸಿಡಿ. ಮರುದಿನ ಬೆಳಿಗ್ಗೆ ಸ್ವಲ್ಪವೇ ನೀರನ್ನು ಬರೆಸಿ ರುಬ್ಬಿ, ಇದಕ್ಕೆ ನೆಲ್ಲಿಕಾಯಿ ಪುಡಿ ಸೇರಿಸಿ ಸ್ನಾನಕ್ಕೆ ಮುನ್ನ ತಲೆಗೆ ಹಚ್ಚಿ. ಮೂವತ್ತು ನಿಮಿಷದ ಬಳಿಕ ಸ್ನಾನ ಮಾಡಿದರೆ ತಲೆಯೂ ತಂಪಾಗುತ್ತದೆ. ಕೂದಲೂ ಸೊಂಪಾಗಿ ಬೆಳೆಯುತ್ತದೆ.